ಭಾನುವಾರ, ಮೇ 16, 2021
26 °C

ಉದ್ಯೋಗ ಖಾತ್ರಿ-12 ರಾಜ್ಯಗಳಲ್ಲಿ ದುರ್ಬಳಕೆ ಆರೋಪ: ಕೇವಲ 5 ತಂಡಗಳಿಂದ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ): ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಎನ್‌ಆರ್‌ಇಜಿಎ)  ಜಾರಿಯಾದಾಗಿನಿಂದ ಇದುವರೆಗೆ ವಿವಿಧ ರಾಜ್ಯಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ 280 ವಿಶೇಷ ತಂಡಗಳನ್ನು ಕಳುಹಿಸಿತ್ತು.ಈ ಯೋಜನೆಗೆ ನೀಡಲಾದ ಹಣ ಅನ್ಯ ಕಾರ್ಯಕ್ಕೆ ಉಪಯೋಗಿಸಿರುವುದು, ದುರ್ಬಳಕೆ ಮತ್ತು ನಕಲಿ ಉದ್ಯೋಗ ಕಾರ್ಡ್‌ಗಳನ್ನು ಸೃಷ್ಟಿಸಿರುವುದನ್ನು ತಂಡ ಪತ್ತೆ ಹಚ್ಚಿದೆ. ಆದರೆ ಕೇವಲ 5 ತಂಡಗಳು ಮಾತ್ರ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದು, ಇದರಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ನಡೆದಿರುವ ಅವ್ಯವಹಾರದ ವರದಿಯೂ ಸೇರಿದೆ ಎಂದು ಈ ಯೋಜನೆ ಅನುಷ್ಠಾನಗೊಳಿಸುತ್ತಿರುವ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆ ಅಡಿ ನೀಡಲಾದ ಮಾಹಿತಿಯಲ್ಲಿ ತಿಳಿಸಿದೆ.ಈ ತಂಡಗಳ ಹೊರತಾಗಿಯೂ 2006-07ರಲ್ಲಿ 8 ರಾಷ್ಟ್ರೀಯ ಮಟ್ಟದ ನಿರ್ವಹಣಾಗಾರರನ್ನು ಒಳಗೊಂಡ 8 ತಂಡಗಳು, 2007-08ರಲ್ಲಿ 28, 2008-09ರಲ್ಲಿ 63, 2009-10ರಲ್ಲಿ  42, 2010-11ರಲ್ಲಿ 85 ಮತ್ತು 2011-12ರಲ್ಲಿ  54 ತಂಡಗಳನ್ನು ಕಳುಹಿಸಲಾಗಿತ್ತು. ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ಜಾರ್ಖಂಡ್, ರಾಜಸ್ತಾನ, ಪಂಜಾಬ್, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ಮತ್ತಿತರ ರಾಜ್ಯಗಳಿಗೆ ತಂಡ ಕಳುಹಿಸಲಾಗಿತ್ತು ಎಂದು ಹೇಳಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.