ಶನಿವಾರ, ಮೇ 15, 2021
24 °C

ಉದ್ಯೋಗ ನೀಡಲು ಒತ್ತಾಯಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಕುಮಾರ ಪಟ್ಟಣ ದಲ್ಲಿ  ರೈತರು ಪ್ರತಿಭಟನೆ ನಡೆಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ತುಂಗಭದ್ರಾ ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಜನಜಾಗೃತಿ ಹೋರಾಟ ಸಮಿತಿ ಆಶ್ರಯದಲ್ಲಿ ಗ್ರಾಸೀಂ ಇಂಡಸ್ಟ್ರೀಜ್ (ಎಚ್‌ಪಿಎಫ್) ಲಿಮಿಟೆಡ್, ಬಿರ್ಲಾ ಕಂಪನಿ ವಿರುದ್ಧ ಸ್ಥಳೀಯ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ನೀಡಲು ಒತ್ತಾಯಿಸಿ ಶುಕ್ರವಾರ ಬಿರ್ಲಾ ಕಂಪನಿಗೆ ಮುತ್ತಿಗೆ, ರಾಷ್ಟ್ರೀಯ ಹೆದ್ದಾರಿ ತಡೆ, ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ ದರು. ನಂತರ ತಹಸೀಲ್ದಾರ ಮಹ್ಮದ್ ಜುಬೈರ್ ಹಾಗೂ ಬಿರ್ಲಾ ಕಂಪನಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಪಂ ಮಾಜಿ ಅಧ್ಯಕ್ಷ ರವೀಂದ್ರ ಗೌಡ ಪಾಟೀಲ ಮಾತನಾಡಿ, ಏ.13 ರಿಂದ 15 ರವರೆಗೆ ಧಾರವಾಡ ಎನ್‌ಟಿಟಿಎಫ್ ಮೂಲಕ ನಡೆಸಿದ ಅಭ್ಯರ್ಥಿ ಗಳ ಆಯ್ಕೆ ಸಂದರ್ಶನ ಪ್ರಕ್ರಿಯೆನ್ನು ರದ್ದು ಪಡಿಸಿ ಸ್ಥಳಿಯರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.ಬಿರ್ಲಾ ಕಂಪನಿಯವರು ಜಲ ಮಾಲಿನ್ಯ, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಉಂಟು ಮಾಡುವುದಲ್ಲದೇ ಕುಮಾರಪಟ್ಟಣ, ನಲವಾಗಲ, ಕೊಡಿ ಯಾಲ ಹೊಸಪೇಟೆ, ಹಿರೇಬಿದರಿ, ಕವ ಲೆತ್ತು, ನದೀಹರಳಳ್ಳಿ, ಐರಣಿ, ಖಂಡೆ ರಾಯನಹಳ್ಳಿ, ಹುಲಿಕಟ್ಟಿ, ಮಾಕ ನೂರು ಸೇರಿದಂತೆ ನೂರಾರು ಗ್ರಾಮ ಗಳ ಜನರ ಜೀವನದೊಂದಿಗೆ ಚೆಲ್ಲಾಟ ವಾಡುತ್ತಿದ್ದಾರೆ, ಜಲಚರ ಪಾಣಿಗಳು ಪಕ್ಷಿಗಳು ನಾಶವಾಗಿವೆ, ನೆಪ ಮಾತ್ರಕ್ಕೆ ನೀರಿನ ಶುದ್ದೀಕರಣ ವಾಯು ಶುದ್ದತೆ ನಾಟಕ ವಾಡುತ್ತಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.ಈ ಕಂಪನಿ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಹಿಂದೇಟು ಹಾಕುತ್ತಿದೆ, ಬಿರ್ಲಾ ಕಂಪನಿಯವರು ನೀಡುವ ಭರವಸೆ ನಂಬಿ ಎಲ್ಲ ತೊಂದರೆ ಅನುಭ ವಿಸಿ ಸಾವಿರಾರು ಯುವಕರು ನಿರುದ್ಯೋಗಿಗಳಾಗಿದ್ದಾರೆ, ಸ್ಥಳೀಯರಿಗೆ ಉದ್ಯೋಗ ನೀಡುವ ಬದಲು ಧಾರ ವಾಡ ಎನ್‌ಟಿಟಿಎಫ್ ಮೂಲಕ ಬೇರೆ ಜಿಲ್ಲೆ, ರಾಜ್ಯದವರಿಗೆ ಉದ್ಯೋಗ ನೀಡು ತ್ತಿದ್ದಾರೆ, ಸ್ಥಳೀಯರ ಕಣ್ಣಿಗೆ ಮಣ್ಣು ಎರಚುವ ಕೆಲಸ ಬಿರ್ಲಾ ಕಂಪನಿ ಮಾಡುತ್ತಿದೆ ಎಂದು ದೂರಿದರು.ತುಂಗಭದ್ರಾ ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಜನಜಾಗೃತಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಣ್ಣ ಬೇಡರ ಮಾತನಾಡಿದರು.ಕಂಪನಿಯ ಪರವಾಗಿ ಉಮೇಶ ದುಗ್ಗಾಣಿ, ಪ್ರಕಾಶ ಕಟ್ಟಿ, ವೇಲು ನಾರಾ ಯಣರಾವ್, ಪ್ರವೀಣ ಮುಂತಾ ದವರು ರೈತರೊಡನೆ ಚರ್ಚಿಸಿದರು.ಬಿ.ಎಂ. ಜಯದೇವ, ಮಂಜಣ್ಣ ಆನ್ವೇರಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸುರೇಶಪ್ಪ ಗರಡೀಮನಿ, ಕರಿ ಬಸಯ್ಯ ಶಂಕರಿಮಠ, ಬಸವರಾಜ ಕರೂರು, ಹರೀಶ ಜಿಂಕೇರಿ, ಎಸ್.ಡಿ. ಹಿರೇಮಠ, ರಂಗಪ್ಪ ಪೂಜಾರ, ಭೀಮಣ್ಣ ಶಿರಿಗೇರಿ, ರಾಘವೇಂದ್ರ ಕಂಬಳಿ, ಸಿದ್ದಪ್ಪ ಕಮದೋಡ, ಶಶಿಧರ ಓಲೇಕಾರ, ಹರೀಶ ಓಲೇಕಾರ, ಕೊಟ್ರೇಶ ಅಣ್ಣೆರ,  ಭೀಮಣ್ಣ ಪ್ಯಾಟಿ ಮನಿ,  ಬಸವರಾಜಪ್ಪ ಹರವಿ,  ಬುಳ್ಳಪ್ಪ ಬಣಕಾರ, ತಿರುಕಪ್ಪ ಪವಾರ,  ನಿಂಗಪ್ಪ ಹಳ್ಳೆಳ್ಳೆಪ್ಪನವರ ಮತ್ತಿತರರು ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿ ಸಿದ್ದರು.ಗಾಮೀಣ ಸಿಪಿಐ ಕೆ.ಸಿ. ಗಿರಿ ಮತ್ತು ಪಿಎಸ್‌ಐ ಭೀಮಣ್ಣ ಸೂರಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ಪ್ರತಿಭಟನಾ ಮೆರವಣಿಗೆಯು ಕವ ಲೆತ್ತು ಮಾರ್ಗದ ದುರ್ಗಮ್ಮನ ದೇವಸ್ಥಾನ ದಿಂದ ಪ್ರಾರಂಭವಾಗಿ ಪಿ.ಬಿ. ರಸ್ತೆ ಮೂಲಕ ಕುಮಾರಪಟ್ಟಣ ಪೊಲೀಸ್ ಕಚೇರಿ ವೃತ್ತದಲ್ಲಿ ರಸ್ತೆತಡೆ ನಡೆಸಿದರು. ನಂತರ ಕಂಪನಿಗೆ ತೆರಳಿ ಮುತ್ತಿಗೆ ಹಾಕಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.