ಶುಕ್ರವಾರ, ಮೇ 14, 2021
23 °C

ಉದ್ಯೋಗ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ಹೆಚ್ಚುವರಿ ಕೆಲಸ ಮಾಡಿದರೂ ಕನಿಷ್ಠ ವೇತನ ನೀಡಲಾಗುತ್ತಿದೆ.  ಅದನ್ನೂ ನಿಯಮಿತವಾಗಿ  ನೀಡುತ್ತಿಲ್ಲ. ಉದ್ಯೋಗ ಭದ್ರತೆಯೂ ಇಲ್ಲ ಎಂಬುದು ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿರುವುದಾಗಿ ಆರೋಪಿಸಿ ತಾಲ್ಲೂಕು ಚಿಕ್ಕಕುರುಗೋಡು ಸಮೀಪದ ಪ್ರೀಕಾಟ್ ಮೆರಿಡಿಯನ್ ಲಿಮಿಟೆಡ್ ಕಾರ್ಖಾನೆಯ ಕಾರ್ಮಿಕರು ಬುಧವಾರ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.`ವೇತನವನ್ನು ಸರಿಯಾಗಿ ನೀಡದೆ ವಿನಾಕಾರಣ ಕಡಿತ ಮಾಡಲಾಗುತ್ತದೆ. ಇಲ್ಲಸಲ್ಲದ ನೆಪಗಳನ್ನು ಹೇಳಿ ವಂಚಿಸಲಾಗುತ್ತಿದೆ. ಯಾವುದೇ ಕ್ಷಣ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿಯೇ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ~ ಎಂದು ಕಾರ್ಮಿಕರು ನೊಂದು ನುಡಿದರು.`ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಭವಿಷ್ಯನಿಧಿ ಸೌಲಭ್ಯ ಕಲ್ಪಿಸಿಲ್ಲ. ನೆಪಗಳನ್ನೊಡ್ಡಿ ಸಂಬಳ ಕಡಿತ ಮಾಡಲಾಗುತ್ತದೆ. ಮಹಿಳಾ ಕಾರ್ಮಿಕರಿಗೆ ನಿತ್ಯ ಶೋಷಣೆಯಾಗುತ್ತಿದೆ. ನಮ್ಮ ಬೇಡಿಕೆಗಳಿಗೆ ಈವರೆಗೆ ಪರಿಹಾರ ಸಿಕ್ಕಲ್ಲ~ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿತ್ರಮ್ಮ ದೂರಿದರು.`ಕಾರ್ಮಿಕ ಇಲಾಖೆಯ ನಿಯಮನುಸಾರವಾಗಿ ಕಾರ್ಮಿಕರಿಗೆ ವೇತನ ನೀಡಬೇಕು. ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರನ್ನು ಸಂಘಟಿಸಲು ಅವಕಾಶ ನೀಡಬೇಕು. ಉದ್ಯೋಗ ತೊರೆದರೆ ಬಾಕಿಯುಳಿದ ಹಣ ಹಿಂದಿರುಗಿಸುವಂತಹ ವ್ಯವಸ್ಥೆಯಾಗಬೇಕು~ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕಾರ್ಮಿಕರಾದ ತನುಜಾ, ಸುಮಾ, ರೋಜಾ, ಮೇಘನಾ, ಬೇಬಿ ಮತ್ತಿತರರು ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.