ಶುಕ್ರವಾರ, ಏಪ್ರಿಲ್ 16, 2021
31 °C

ಉದ್ಯೋಗ ಭರವಸೆ ನೀಡಿದ ರೈಲ್ವೆ: ಸೋನುಗೆ 2 ಲಕ್ಷ ರೂ. ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದುಷ್ಕರ್ಮಿಗಳ ರಾಕ್ಷಸ ಕೃತ್ಯಕ್ಕೆ ಸಿಲುಕಿ ತನ್ನ ಎಡಗಾಲು ಕಳೆದುಕೊಂಡಿರುವ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಸೋನು ಸಿನ್ಹಾ ಅವರ ಚಿಕಿತ್ಸಾ ವೆಚ್ಚಕ್ಕೆ ಕ್ರೀಡಾ ಸಚಿವಾಲಯ ಎರಡು ಲಕ್ಷ ರೂಪಾಯಿ ನೆರವು ಪ್ರಕಟಿಸಿದೆ.

’ಮಂಗಳವಾರ ನಾವು ಸೋನುಗೆ 25 ಸಾವಿರ ರೂ. ಪ್ರಕಟಿಸಿದ್ದೆವು. ಈಗ ಅವರ ಚಿಕಿತ್ಸೆ ವೆಚ್ಚಕ್ಕಾಗಿ 2 ಲಕ್ಷ  ನೀಡುತ್ತಿದ್ದೇವೆ’ ಎಂದು ಕ್ರೀಡಾ ಸಚಿವ ಅಜಯ್ ಮಾಕನ್ ತಿಳಿಸಿದ್ದಾರೆ.

ಅಷ್ಟು ಮಾತ್ರವಲ್ಲದೇ, ಸೋನುಗೆ ಉದ್ಯೋಗ ನೀಡುವುದಾಗಿ ರೈಲ್ವೆ ಸಚಿವಾಲಯ ಭರವಸೆ ನೀಡಿದೆ. ಕೃತಕ ಕಾಲು ಸೇರಿದಂತೆ ಅವರ ಚಿಕಿತ್ಸೆಯ ಪೂರ್ಣ ವೆಚ್ಚ ಭರಿಸುವುದಾಗಿ ರೈಲ್ವೆ ಮಂಡಳಿಯ ಮುಖ್ಯಸ್ಥ ವಿವೇಕ್ ಸಹಾಯ್ ಹೇಳಿದ್ದಾರೆ.

ಬರೇಲಿ ಆಸ್ಪತ್ರೆಯಲ್ಲಿ ಸೋನು ಚಿಕಿತ್ಸೆ ಪಡೆಯುತ್ತಿದ್ದಾರೆ. ಪರೀಕ್ಷೆಗೆಂದು ಸೋಮವಾರ ನವದೆಹಲಿಗೆ ತೆರಳುತ್ತಿದ್ದಾಗ ಅವರನ್ನು ದುಷ್ಕರ್ಮಿಗಳು ಬರೇಲಿ ಸಮೀಪ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿನಿಂದ ಹೊರ ತಳ್ಳಿದ್ದರು. ಟ್ರ್ಯಾಕ್‌ನ ಮೇಲೆ ಬಿದ್ದ ಸೋನು ಅವರ ಕಾಲಿನ ಮೇಲೆ ಇನ್ನೊಂದು ರೈಲು ಹಾದು ಹೋಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.