ಉದ್ಯೋಗ ಮೀಸಲಾತಿ ಕಲ್ಪಿಸಿ!

7

ಉದ್ಯೋಗ ಮೀಸಲಾತಿ ಕಲ್ಪಿಸಿ!

Published:
Updated:

ಸೇನೆಯಲ್ಲಿ 15 ವರ್ಷ ಸೇವೆ ಪೂರೈಸಿ, ನಿವೃತ್ತಿ ಪಡೆಯುವ ಸೈನಿಕರಿಗೆ ಸರ್ಕಾರಿ ಹುದ್ದೆಗಳಲ್ಲಿ, ಬ್ಯಾಂಕ್‌ಗಳಲ್ಲಿ ಹಾಗೂ ಇನ್ನಿತರೆ ಕ್ಷೇತ್ರಗಳ ನೇಮಕಾತಿಯಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಅದೇ ರೀತಿ 15 ವರ್ಷ ಸೇವೆ ಪೂರೈಸಿ, ಸ್ವಯಂ ನಿವೃತ್ತಿ ಪಡೆಯುವ ರಾಜ್ಯದ ಪೊಲೀಸರಿಗೆ ಇತರೆ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಬೇಕು.

 

ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕೆಲಸ ಶ್ಲಾಘನೀಯ. 15 ವರ್ಷ ಸೇವೆ ಪೂರೈಸಿ, ಸಂಸಾರದ ಜಂಜಾಟವೋ ಇನ್ನಿತರ ಕಾರಣಗಳಿಗೋ ಸ್ವಯಂ ನಿವೃತ್ತಿ ಪಡೆದರೆ, ಅವರ ಜಾಗಕ್ಕೆ ಹೊಸ ರಕ್ತದ ಯುವಕ-ಯುವತಿಯರು ನೇಮಕಗೊಳ್ಳಬಹುದು. ಅದರಿಂದ ಪೊಲೀಸ್ ಇಲಾಖೆಗೆ ಹೊಸ ಶಕ್ತಿ ಬಂದಂತಾಗುತ್ತದೆ. 40 ವರ್ಷ ವಯಸ್ಸಿನ ನಂತರ ಪೊಲೀಸರಿಗೆ ಎಲ್ಲಾ ರೀತಿಯ ಕರ್ತವ್ಯ ನಿರ್ವಹಿಸುವುದು ಕಷ್ಟಕರ. 50 ವರ್ಷ ಪೂರೈಸಿದವರಿಗಂತೂ ಇನ್ನೂ ಕಷ್ಟ. ಸಂಬಂಧಪಟ್ಟವರು ಈ ಬಗ್ಗೆ ಚಿಂತನೆ ನಡೆಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry