ಉದ್ಯೋಗ ಮೇಳದಲ್ಲಿ ನೇಮಕಾತಿ

7

ಉದ್ಯೋಗ ಮೇಳದಲ್ಲಿ ನೇಮಕಾತಿ

Published:
Updated:

ಕೆಂಗೇರಿ:  ಕಾಂಗ್ರೆಸ್ ಪಕ್ಷದ ಯಶವಂತಪುರ ವಿಧಾನಸಭಾ ಕ್ಷೇತ್ರ ಘಟಕವು ಇಲ್ಲಿನ ಕೃಷ್ಣಪ್ರಿಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 528 ಯುವಕ ಯುವತಿಯರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರವನ್ನು ಭಾಗವಹಿಸಿದ ಕಂಪೆನಿಗಳು ನೀಡಿದವು.

"

ಸುತ್ತಮುತ್ತಲ ಪ್ರದೇಶವಲ್ಲದೇ ದೂರದ ಬಡಾವಣೆಗಳಿಂದಲೂ ಉದ್ಯೋಗ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಮೇಳದಲ್ಲಿ ಒಟ್ಟು 1,300 ನಿರುದ್ಯೋಗಿಗಳು ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಸಂದರ್ಶನದಲ್ಲಿ ಭಾಗವಹಿಸಿದರು.ಸ್ಪರ್ಶ ಬಿಪಿಓ, ಬಜಾಜ್ ಅಲಯನ್ಸ್, ಕೈಲೋ ಸಿಸ್ಟಮ್ಸ, ಸೆಲ್ ನೆಟ್, ಮುಂತಾದ ಐಟಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.ರಾಜ್ಯ ಸಹಕಾರ ವಸತಿ ಮಹಾಮಂಡಲದ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ನೇಮಕಾತಿ ಪತ್ರ ವಿತರಿಸಿದರು.ವಿವಿಧ ಕಂಪನಿಗಳ ಮುಖ್ಯಸ್ಥರಾದ ಗುರುದತ್ ಪೈ, ಸಚಿನ್ ಕೆಲ್ಗೋಡ್, ಸುಮಿತರಾಜ್, ವಾಸು ಪ್ರಸಾದ್, ಪಾಲಿಕೆ ಸದಸ್ಯ ರಾಜಣ್ಣ, ಕೆಂಗೇರಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೆ.ಎನ್.ಜನಾರ್ದನ, ಪ್ರಧಾನ ಕಾರ್ಯದರ್ಶಿ ಪಿ.ಗಾಂಧಿ, ಪಟ್ಟಣಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಮುಖಂಡರಾದ ಶೈಲೇಶ್, ರಾಮಮೂರ್ತಿ, ಎಂ.ಪಿ.ಶಿವಸ್ವಾಮಿ, ಮಹೇಂದ್ರ ಎನ್.ಎಸ್.ಕಿರಣ್, ವೆಂಕಟಾಚಲಪತಿ, ಅರುಣ್ ಕುಮಾರ್, ಬಾಲಕೃಷ್ಣ ಇತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry