ಉದ್ಯೋಗ ಮೇಳ 18ರಂದು

7

ಉದ್ಯೋಗ ಮೇಳ 18ರಂದು

Published:
Updated:

ಬೆಂಗಳೂರು: ಉದ್ಯೋಗ ವಿನಿಮಯ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಜ.18 ರಂದು ಬ್ಯಾಟರಾಯನಪುರದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿವೆ.ಖಾಸಗಿ ವಲಯದ ಐ.ಟಿ.ಸಿ, ಆದಿತ್ಯ ಬಿರ್ಲಾ ಮಿನಾಕ್ಸ್, ಐಎನ್‌ಜಿ ವೈಶ್ಯ ಬ್ಯಾಂಕ್, ಎಂಫಾಸಿಸ್ ಎಚ್‌ಪಿ. ಕಂಪೆನಿ, ಸಿಟಿ ಪ್ರಾಪರ್ಟಿಸ್, ವಿಪ್ರೊ   ಎಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್, ಕಾಫಿ ಡೇ, ವೋಲ್ವೊ, ಯಜಾಕಿ ಇಂಡಿಯಾ ಲಿಮಿಟೆಡ್, ಅಪೊಲೊ ಪವರ್ ಸಿಸ್ಟಂ,  ಎಲ್.ಜಿ. ಎಲೆಕ್ಟ್ರಾನಿಕ್ಸ್, ಜೈನ್ ಕಾಲೇಜು ಇನ್ನೂ ಮುಂತಾದ ಸಂಸ್ಥೆಗಳು ಭಾಗವಹಿಸುತ್ತಿವೆ.ಅಕ್ಷರಸ್ಥರು, ಎಸ್ಸೆಸ್ಸೆಲ್ಸಿ ಉತ್ತೀರ್ಣ  ಅಥವಾ ಅನುತ್ತೀರ್ಣರಾದವರು, ಪಿಯುಸಿ, ಐಟಿಐ ಮತ್ತು ಯಾವುದೇ ಡಿಪ್ಲೊಮಾ,  ಸಿ.ಎನ್.ಸಿ. ಆಪರೇಟರ್‌ಗಳು, ಎಲ್ಲಾ ಪದವೀಧರ ಅಭ್ಯರ್ಥಿಗಳು ಹಾಗೂ ಅಂಗವಿಕಲರು ತಮ್ಮ ವೈಯಕ್ತಿಕ ವಿವರಗಳೊಂದಿಗೆ ಉದ್ಯೋಗ ಮೇಳ ದಲ್ಲಿ ಭಾಗವಹಿಸಬಹುದು.ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ದೂರವಾಣಿ ಸಂಖ್ಯೆ : ೨೨೨೫ ೯೩೫೧, ೨೨೩೭ ೪೫೮೨, ೨೨೨೬ ೧೧೮೪.ಸ್ಥಳ: ಕಾವೇರಿ ಪದವಿ ಕಾಲೇಜು, ಕೊಡಿಗೇಹಳ್ಳಿ ಮುಖ್ಯ ರಸ್ತೆ, ಸಹಕಾರ ನಗರ, ಬ್ಯಾಟರಾಯನಪುರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry