ಬುಧವಾರ, ಜೂನ್ 16, 2021
28 °C

ಉದ್ಯೋಗ ಮೇಳ: 300 ಮಂದಿಗೆ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನಗರದ ಕೆಎಲ್‌ಇ ಸಂಸ್ಥೆಯ ಜಿ.ಟಿ.ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ದಾಖಲೆ ಪರಿಶೀಲನೆ ಮತ್ತು ಅಂತಿಮ ಸುತ್ತಿನ ಸಂದರ್ಶನ ಬಳಿಕ 300 ಮಂದಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡಲಾಯಿತು.ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲದೆ ಪಕ್ಕದ ಜಿಲ್ಲೆಯಿಂದಲ್ಲೂ ನಿರುದ್ಯೋಗಿ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದ­ವೀಧರರು ಮತ್ತು ಅಂತಿಮ ವರ್ಷದ ಪದವೀಧ­ರರು ಸೇರಿದಂತೆ ಮೂರು ಸಾವಿರ ಮಂದಿ ಸರದಿ ಸಾಲಿನಲ್ಲಿ ನಿಂತು ಹೆಸರು ನೋಂದಾ­ಯಿಸಿಕೊಂಡರು.ಕಾಲೇಜು ಆವರಣದಲ್ಲಿಯೇ ಪದವಿ, ಐಟಿಐ, ಡಿಪ್ಲೊಮಾ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೌಂಟರ್‌ ತೆರೆದು ಹೆಸರು ನೋಂದಣಿ ಮಾಡಿಕೊಳ್ಳಲಾಯಿತು. ಟೆಕ್‌ ಮಹೇಂದ್ರ, ಟಾಟಾ ಮಾರ್ಕಪೋಲೊ, ಐಸಿಐಸಿಐ ಬ್ಯಾಂಕ್‌, ಶ್ರೀರಾಮ ಟ್ರಾನ್ಸ್‌ಪೂರ್ಟ್‌ ಫೈನಾನ್ಸ್‌, ಒನಿಡಾ, ಸನ್‌ಸ್ಟಾರ್‌, ಎಲ್‌ಐಸಿ, ಆದಿತ್ಯಾ ಬಿರ್ಲಾ ಮಿನಾಕ್ಸ್‌, ಪ್ರೊಮೋಸ್‌ ಇಂಡಿಯಾ ಲಿಮಿಟೆಡ್‌, ಹೆಡ್‌ ಹೆಲ್ಡ್‌ ಹೈ, ಅಪೆಕ್ಸ್‌ ಸೇರಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ಕಂಪೆನಿಗಳು ಭಾಗವಹಿಸಿದ್ದವು. ಒಟ್ಟು 26 ಕಂಪೆನಿಗಳು ಪಾಲ್ಗೊಂಡಿದ್ದವು.ಕಂಪೆನಿ ಪ್ರತಿನಿಧಿಗಳು ಅಭ್ಯರ್ಥಿಗಳ ದಾಖಲೆ ಪರೀಶಿಲನೆ ನಡೆಸಿದರು. ಮೊದಲ ಮತ್ತು ಎರಡನೇ ಸುತ್ತಿನ ಸಂದರ್ಶನ ಬಳಿಕ ಅರ್ಹ ಅಭ್ಯರ್ಥಿಗಳನ್ನು ಕೊನೆಯ ಸುತ್ತಿನ ಸಂದರ್ಶನಕ್ಕೆ ಆಯ್ಕೆ ಮಾಡಿದರು. ದಿನದ ಅಂತ್ಯಕ್ಕೆ ಒಟ್ಟು 300 ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿತು. ಕೆಲ ಕಂಪೆನಿಗಳು ಸಂದರ್ಶನವನ್ನು ಗುರುವಾರ ಮತ್ತು ಶುಕ್ರವಾರಕ್ಕೂ ನಿಗದಿ ಪಡಿಸಿವೆ.ಬೆಳಿಗ್ಗೆ ಉದ್ಯೋಗ ಮೇಳಕ್ಕೆ ಧಾರವಾಡದ ಸಿಡಾಕ್ ಕೇಂದ್ರದ ನಿರ್ದೇಶಕ ಡಾ. ಎಸ್.ಎಚ್‌.ವೀರಣ್ಣ ಚಾಲನೆ ನೀಡಿ ಮಾತನಾಡಿ, ದೇಶದ ಅಭಿವೃದ್ಧಿಗೆ ಯುವಶಕ್ತಿಯೇ ಆಧಾರ. ಭಾರತದಲ್ಲಿ 14 ರಿಂದ 40 ರ ವಯೋಮಾನದ ಯುವಕರು ಒಟ್ಟು ಜನಸಂಖ್ಯೆಯ ಶೇಕಡಾ 40 ರಷ್ಟು ಇದ್ದಾರೆ.  ಭಾರತೀಯರು ಬುದ್ಧಿವಂತಿಕೆ ಮತ್ತು ಜೀವನ ಕೌಶಲ್ಯಗಳ ಸಂಗಮದಂತೆ ಇದ್ದಾರೆ. ಹೀಗಾಗಿ ವಿಶ್ವದ ಕಣ್ಣು ದೇಶದ ಕಡೆ ಮುಖ ಮಾಡಿದೆ. ಅದರಲ್ಲೂ ಜಗತ್ತಿನ ಕಣ್ಣು ಬೆಂಗಳೂರಿನ ಕಡೆ ನೆಟ್ಟಿದೆ ಎಂದು ಹೇಳಿದರು.ಧಾರವಾಡದ ಸಿಡಾಕ್ನ ಉಪನಿರ್ದೇಶಕ  ಸಿ.ಎಚ್. ಅಂಗಡಿ, ವ್ಯಕ್ತಿ ಮೊದಲು ಉದ್ಯೋಗ ಪಡೆಯಬೇಕು. ನಂತರ ಅನುಭವಗಳ ಮೂಲಕ ಉದ್ಯಮ ಸ್ಥಾಪಿಸಬೇಕು ಉದ್ಯೋಗಪತಿಗಳಾಗಿ ಬೆಳೆಯಬೇಕೆಂದು ಎಂದರು.ಲಾಜಿಕ್ ಕಂಪ್ಯೂಟರ್ ಕೇಂದ್ರದ  ಮಹೇಶ ಭಟ್,  ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡ­ಳಿಯ ಕಾರ್ಯಾಧ್ಯಕ್ಷ ಡಾ. ವಿ.ಐ. ಕುರಗೋಡ ಮಾತನಾಡಿದರು. ಪ್ರಾಚಾರ್ಯ ಎಸ್.ಎಸ್. ಯಂಕಂಚಿ ಸ್ವಾಗತಿಸಿದರು. ಪ್ರಾ. ಎಂ.ಬಿ. ಚನ್ನಪ್ಪಗೌಡರ  ಪರಿಚಯಿಸಿದರು. ಉಪನ್ಯಾಸಕಿ ಆಶಾ ಪ್ರಾರ್ಥಿಸಿದರು. ಉದ್ಯೋಗ ವಿನಮಯ ಮಾಹಿತಿ ಅಧಿಕಾರಿ  ಎಸ್.ಎಫ್. ಹಾಸಿಲ್ಕರ್ ವಂದಿಸಿದರು. ಎಂ.ಎಂ. ನರಗುಂದ,  ಈಶಣ್ಣ ಸಿ ಮುನವಳ್ಳಿ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.