ಶನಿವಾರ, ಮೇ 15, 2021
24 °C

ಉದ್ರಿಕ್ತ ಗ್ರಾಮಸ್ಥರಿಂದ ವಾಹನಗಳಿಗೆ ಕಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಅತಿ ವೇಗದಿಂದ ಬಂದ ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ  ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರ ವಲಯದಲ್ಲಿರುವ ಅಂದ್ರಾಳ್ ಗ್ರಾಮದ ಬಳಿಯ ಬೈಪಾಸ್ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.ತಾಲ್ಲೂಕಿನ ಕಲ್ಲುಕಂಬ ಗ್ರಾಮದ ರಾಘವೇಂದ್ರ (25) ಮೃತ ಯುವಕ. ಅಂದ್ರಾಳು ಗ್ರಾಮದಲ್ಲಿರುವ ಹೆಂಡತಿಯ ಮನೆಗೆ ಬಂದಿದ್ದ ಈತ, ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಬಹಿರ್ದೆಸೆಗೆ ತೆರಳಿ ಮನೆಗೆ ಮರಳುತ್ತಿದ್ದಾಗ ರಸ್ತೆ ದಾಟುವ ಸಂದರ್ಭ ವೇಗದಿಂದ ಬಂದ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟ.ಈ ಘಟನೆಯಿಂದ ಉದ್ರಿಕ್ತರಾದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಬೈಪಾಸ್ ರಸ್ತೆಗೆ ಆಗಮಿಸಿ ಕಾರ್ ಚಾಲಕ ವೆಂಕಟೇಶನನ್ನು ಹಿಗ್ಗಾಮುಗ್ಗಾ ಥಳಿಸಿದರಲ್ಲದೆ, ಕಾರ್‌ಗೆ ಕಲ್ಲು ತೂರಿ ಜಖಂಗೊಳಿಸಿದರು. ಅಲ್ಲದೆ, ರಸ್ತೆಯ ಮೇಲೆ ಹೊರಟಿದ್ದ 25ಕ್ಕೂ ಅಧಿಕ ಲಾರಿಗಳ ಮೇಲೆ ಮನಬಂದಂತೆ ಕಲ್ಲು ತೂರಾಟ ನಡೆಸಿ, ಗಾಜುಗಳನ್ನು ಒಡೆದು ಹಾಕಿದರು.ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಿ, ಕಾರ್ ಚಾಲಕನನ್ನು ತಮ್ಮ ವಶಜಕ್ಕೆ ತೆಗೆದುಕೊಂಡರು. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಗ್ರಾಮೀಣ ಭಾಗದ ಡಿವೈಎಸ್‌ಪಿ ರುದ್ರಮುನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.