ಭಾನುವಾರ, ಮೇ 16, 2021
22 °C

ಉನ್ನತ ಅಧ್ಯಯನ ಗುರಿ ಸಾಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಉನ್ನತ ಅಧ್ಯಯನಕ್ಕೆ ಕೊರತೆಗಳು ಮುಖ್ಯವಾಗದೆ, ಆಸಕ್ತಿ- ಆಶಯ ಪ್ರಧಾನವಾದರೆ ಗುರಿ ಸಾಧಿಸಬಹುದು. ಆಳ ಅಧ್ಯಯನದ ಪ್ರಯೋಜನ ಸಮಾಜಕ್ಕೆ ತಲುಪಿದರೆ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬಿ.ಎಚ್.ನರೇಂದ್ರ ಪೈ ಅಭಿಪ್ರಾಯಪಟ್ಟರು.ಐಡಿಎಸ್‌ಜಿ ಸರ್ಕಾರಿ ಕಾಲೇಜು ಸ್ನಾತಕೋತ್ತರ ಅಧ್ಯಯನ ವಿಭಾಗಗಳ ವತಿಯಿಂದ ಕಾಲೇಜಿನ ಮಲ್ಲೇಗೌಡ ಸಭಾಂಗಣದಲ್ಲಿ ಶುಕ್ರವಾರ ಆಯೋಜಿ ಸಿದ್ದ  ಸ್ನಾತಕೋತ್ತರ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದರು.ಮಧ್ಯಮ ವರ್ಗ ಮತ್ತು ಬಡವಿದ್ಯಾರ್ಥಿಗಳಿಗೆ ಅನುಕೂಲವಾ ಗ ಲೆಂದು ಹಿರಿಯರು ಹಾಗೂ ಶಾಸಕರು ಪಟ್ಟ ಶ್ರಮದಿಂದ ಸ್ನಾತಕೋತ್ತರ ವಿಭಾಗ ತೆರೆಯಲಾಗಿದೆ.  ಈ ಕಾಲೇಜಿನಲ್ಲಿ ಸುಲಭವಾಗಿ ಸೀಟು ಲಭ್ಯವಿದೆ. ಆದರೆ ಖಾಸಗಿ ಕಾಲೇಜುಗಳಲ್ಲಿ ಇದೇ ವಿಭಾಗಗಳು ಆರಂಭಗೊಂಡಿದ್ದರೆ 40ರಿಂದ 50 ಸಾವಿರಕ್ಕೆ ಸೀಟು ಮಾರಾಟವಾಗುತ್ತಿದ್ದವು  ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಜಗದೀಶಪ್ಪ ವಿದ್ಯಾರ್ಥಿ ಸಮುದಾಯದ ಆಶೋತ್ತರಗಳಿಗೆ ವಿದ್ಯಾರ್ಥಿ ಸಂಘಗಳು ಸ್ಪಂದಿಸಬೇಕು. ಪ್ರಗತಿಪರ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಾಗಬೇಕು ಎಂದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜರೀನಾ ಕೌಸರ್ ಮಾತನಾಡಿ, ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ ಮತ್ತು ರಾಸಾಯನಶಾಸ್ತ್ರ ನಾಲ್ಕು ಸ್ನಾತ ಕೋತ್ತರ ಅಧ್ಯಯನ ವಿಭಾಗ ಗಳಿದ್ದು, ಸುಮಾರು 150 ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.ಹಿರಿಯ ಉಪನ್ಯಾಸಕ ಪ್ರೊ.ಕೆ.ಸಿ.ಬಸವರಾಜಪ್ಪ ಮಾತನಾಡಿದರು. ರ‌್ಯಾಂಕ್ ವಿಜೇತ ನವೀನ್‌ಕುಮಾರ್, ಶ್ರುತಿ, ಮಧು ಕುಮಾರ್ ಮತ್ತು ನಾಜೀಯಾತಮಸಮ್ ಅವರನ್ನು ನರೇಂದ್ರಪೈ ನಗದು ಬಹುಮಾನ ನೀಡಿ ಸನ್ಮಾನಿಸಿದರು.ಸಾಂಸ್ಕೃತಿಕ ಸ್ಪರ್ಧಾ ವಿಜೇತರನ್ನು ಅನುರಾಧ ಮತ್ತು ಸ್ನೇಹಲ್, ಕ್ರೀಡಾ ಸಾಧಕರನ್ನು ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಬಿ.ಯೋಗೀಶ್ ಪರಿಚಯಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಕೆ.ಎಂ.ರಾಜಣ್ಣ, ಕ್ರೀಡಾ ವೇದಿಕೆ ಸಂಚಾಲಕ ಡಾ.ಮೂಡಲಗಿರಿಯಯ್ಯ, ವಿದ್ಯಾರ್ಥಿನಿಯರಾದ ಜಿ.ಪಲ್ಲವಿ, ಸುಜಾತ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.