ಶನಿವಾರ, ಮೇ 15, 2021
24 °C

ಉನ್ನತ ಶಿಕ್ಷಣ ಬಿಳಿಯಾನೆ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಉನ್ನತ ಶಿಕ್ಷಣ ಎನ್ನುವುದು ಬಿಳಿಯಾನೆ ಅಲ್ಲ. ಅದರಿಂದ ಬಹುವಿಧದ ಉಪಯೋಗವಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್. ಇಂದುಮತಿ ಹೇಳಿದರು.ನಗರದ ಬಾಪೂಜಿ ಬಿ-ಸ್ಕೂಲ್‌ನಲ್ಲಿ `ಮ್ಯಾಕುಫೆ- 2ಕೆ12~ `ಗ್ಲೇಸಿಯರ್ಸ್~ ನಿರ್ವಹಣಾ ಉತ್ಸವ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.1989ರಲ್ಲಿ ಯುನೆಸ್ಕೋ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟಿತು. ಆದರೂ, ಜನರಲ್ಲಿ ಅದರ ಬಗ್ಗೆ ಸರಿಯಾದ ತಿಳಿವಳಿಕೆ ಮೂಡಲಿಲ್ಲ. ಅದರ ಬಹುವಿಧದ ಪ್ರಯೋಜನದ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಮೂಲ ಶಿಕ್ಷಣದ ಗುಣಮಟ್ಟ ಸಮರ್ಪಕವಾಗಿದ್ದರೆ ಉನ್ನತ ಶಿಕ್ಷಣದವರೆಗೂ ಅದೇ ಗುಣಮಟ್ಟ ಕಾಯ್ದುಕೊಳ್ಳಬಹುದು. ಒಬ್ಬ ವ್ಯಕ್ತಿಯನ್ನು ಸುಶಿಕ್ಷಿತನನ್ನಾಗಿ ಮಾಡಿದರೆ ಇಡೀ ಸಮುದಾಯವನ್ನು ಅಭಿವೃದ್ಧಿ ಮಾಡಲು ಸಾಧ್ಯ. ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವು ದೇಶದ ಅಭಿವೃದ್ಧಿಗೆ ಪೂರಕ ಎಂದರು.ನಿರ್ವಹಣಾ (ಮ್ಯಾನೇಜ್‌ಮೆಂಟ್) ಕ್ಷೇತ್ರದಲ್ಲಿ ಸಾಕಷ್ಟು ತರಬೇತಿ ಹೊಂದಿದವರ ಪೂರೈಕೆ ಇದೆ. ಆದರೆ, ಅದಕ್ಕೆ ತಕ್ಕಹಾಗೆ ಬೇಡಿಕೆ ಇಲ್ಲ. ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ತಮ್ಮ ಗುಣಮಟ್ಟ ಕಾಯ್ದುಕೊಂಡು ಈ ಕ್ಷೇತ್ರದ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.