ಉಪಕಾರ ಸ್ಮರಣೆ ಜೀವನದ ಶ್ರೇಷ್ಠ ಮೌಲ್ಯ

7

ಉಪಕಾರ ಸ್ಮರಣೆ ಜೀವನದ ಶ್ರೇಷ್ಠ ಮೌಲ್ಯ

Published:
Updated:

ಕಾರ್ಕಳ: `ಉಪಕಾರ ಸ್ಮರಣೆ ಜೀವನದ ಶ್ರೇಷ್ಠ ಮೌಲ್ಯ~ ಎಂದು  ಬೆಳ್ಮಣ್ ಸೇಂಟ್ ಜೋಸೆಫ್ ಚರ್ಚಿನ ಪ್ರಧಾನ ಧರ್ಮಗುರು ಫಾ.ಲಾರೆನ್ಸ್ ಬಿ.ಡಿಸೋಜ ಇಲ್ಲಿ ತಿಳಿಸಿದರು.ತಾಲ್ಲೂಕಿನ ಬೆಳ್ಮಣ್ ಸಂತ ಜೋಸೆಫರ ಶಾಲೆಯ ಸಭಾಭವನದಲ್ಲಿ ಗುರುವಾರ ಶಿಕ್ಷಕ ರಕ್ಷಕರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು`ಬಾಲ್ಯದಲ್ಲಿ ಕಲಿಸುವ ಮೌಲ್ಯಗಳು ಜೀವನಕ್ಕೆ ದಾರಿದೀಪ. ಬದುಕಿನಲ್ಲಿ ತಾಯಿ, ತಂದೆ, ಗುರು ಮತ್ತಿತರರ ನೆರವನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುವುದು ನಮ್ಮ ಕರ್ತವ್ಯ~ ಎಂದರು.`ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಪರಿಸರ ಜ್ಞಾನ  ಅಧಿಕವಾಗಿರುತ್ತದೆ~ ಎಂದರು.ಶಿಕ್ಷಕರಾದ ಬಿ.ಪುಂಡಲೀಕ ಮರಾಠೆ, ವಿನ್ಸೆಂಟ್ ಪಿಂಟೊ ಮಾತನಾಡಿದರು. ಕ್ರೀಡೋತ್ಸವದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಬೆಳ್ಮಣ್ ಗ್ರಾ.ಪಂ ಸದಸ್ಯೆ ಗೀತಾ ಪ್ರಭು, ಪಾಲಕರ ಪ್ರತಿನಿಧಿ ಹಿಲ್ಡಾ ರೆಬೆಲ್ಲೊ, ಮುಖ್ಯಶಿಕ್ಷಕಿ ಮೊನಿಕಾ, ಸೆವ್ರಿನ್ ಮೆಂಡೊನ್ಸಾ, ಹಷೇಂದ್ರಕುಮಾರ್ ಜೈನ್, ಜುಲಿಯಾನಾ ಮೊರಾಸ್, ಸಿಸ್ಟರ್ ದಾಯ್ಜಿ, ಲವಿನಾ ಪಿಂಟೊ, ಬಾಲವಾಡಿ ಶಿಕ್ಷಕಿ ಸುಚಿತ್ರಾ, ಶಿಕ್ಷಕಿ ಲಿಲ್ಲಿ ಡಿಸೋಜ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry