ಶುಕ್ರವಾರ, ಮಾರ್ಚ್ 5, 2021
23 °C
ಕೆಂಭಾವಿ ಸಮೀಪದ ನಾರಾಯಣಪುರ ಎಡದಂಡೆ ಕಾಲುವೆ

ಉಪಕಾಲುವೆಗೆ ಹರಿಯದ ನೀರು: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪಕಾಲುವೆಗೆ ಹರಿಯದ ನೀರು: ಪ್ರತಿಭಟನೆ

ಕೆಂಭಾವಿ: ನಾರಾಯಣಪುರ ಎಡದಂಡೆ ಕಾಲುವೆಯ ಜೇವರ್ಗಿ ಶಾಖಾ ಕಾಲುವೆಗೆ ಕಡಿಮೆ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತರು ಗುರುವಾರ ಕಾಲುವೆಯ ಗೇಟ್‌ಬಳಿ ಪ್ರತಿಭಟನೆ ನಡೆಸಿದರು.ಮುಖ್ಯ ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿಯುತ್ತಿದ್ದು ಇಂಡಿ ಹಾಗೂ ಶಹಾಪುರ, ಕಾಲುವೆಗಳಿಗೆ ಬೇಡಿಕೆಯಂತೆ ನೀರು ಹರಿಸಲಾಗುತ್ತಿದೆ.ಆದರೆ ಜೇವರ್ಗಿ ಶಾಖಾ ಕಾಲುವೆಗೆ ಮಾತ್ರ ಕೇವಲ 300 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ಈ ಭಾಗದ ಬೆಳೆಗಳಿಗೆ ಸಮರ್ಪಕ ನೀರು ಸಿಗದೆ ಬೆಳೆಗಳು ಒಣಗುತ್ತಿವೆ. ಸದ್ಯ ಕಾಲುವೆಯಲ್ಲಿ ಹರಿಯುತ್ತಿರುವ ನೀರು ಯಾವುದಕ್ಕೂ ಸಾಲದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಉಪ ಕಾಲುವೆಗಳ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ಮಾತಿಗೆ ಅಧಿಕಾರಿಗಳು ತಾಳ ಹಾಕುತ್ತಿದ್ದಾರೆ. ನೀರು ಬಿಡುವ ಮುನ್ನವೆ ಕಾಮಗಾರಿ ಮುಗಿಯಬೇಕಿತ್ತು. ಆದರೆ, ತಡವಾಗಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ನಾರಾಯಣಪುರ ಮುಖ್ಯ ಕಾಲುವೆಗೆ ನೀರು ಹರಿಸಿ ಎರಡು ತಿಂಗಳೇ ಗತಿಸಿದರೂ ಜೇವರ್ಗಿ ಶಾಖಾ ಕಾಲುವೆಗೆ ಮಾತ್ರ ಇಲ್ಲಿಯವರೆಗೂ ರೈತರ ಬೇಡಿಕೆಯಂತೆ ನೀರು ಹರಿಸುತ್ತಿಲ್ಲ.ಈ ಕುರಿತು ನಿಗಮದ ಅಧಿಕಾರಿಗಳನ್ನು ವಿಚಾರಿಸಿದರೆ ಈ ಕಾಲುವೆ ವ್ಯಾಪ್ತಿಯಲ್ಲಿ ಬರುವ ಉಪ ಕಾಲುವೆಗಳ ದುರಸ್ತಿ ಕಾರ್ಯ ಕೈಗೊಂಡಿರುವುದರಿಂದ ನೀರು ಬಿಡಲು ವಿಳಂಬವಾಗುತ್ತಿದೆ ಎಂಬ ಉತ್ತರ ನೀಡುತ್ತಾರೆ.ಕಾಲುವೆಗೆ ನೀರು ಬಿಟ್ಟಾಗ ಉಪಕಾಲುವೆಗಳ ದುರಸ್ತಿ ಕಾರ್ಯ ಕೈಗೊಂಡಿದ್ದು ಏಕೆ? ಎಂದು ರೈತ ಯಮನಪ್ಪಗೌಡ ಪ್ರಶ್ನಿಸಿದ್ದಾರೆ.ಉಪಕಾಲುವೆ ಸಂಖ್ಯೆ 1,2,3,4 ನೇ ಭಾಗದ ಅನೇಕ ರೈತರು ಏಕಾಏಕಿ ಗೇಟ್‌ಗಳಿಗೆ ಮುತ್ತಿಗೆ ಹಾಕಿದ್ದರಿಂದ ಗಲಿಬಿಲಿಗೊಂಡ ಗೇಟ್ ನಿರ್ವಹಣೆಯ ಸಿಬ್ಬಂದಿ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತಂದರು. ಪ್ರತಿಭಟನಾ ಸ್ಥಳಕ್ಕೆ ಬಂದ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಯಪ್ರಕಾಶ ಪೊದ್ದಾರ ಅವರೊಂದಿಗೆ ಕೆಲಕಾಲ ರೈತರು ಮಾತಿನ ಚಕಮಕಿ ನಡೆಸಿದರು.ನಂತರ ರೈತರ ಜೊತೆ ಸಮಾಲೋಚನೆ ನಡೆಸಿದ ಪೊದ್ದಾರ ಮೇಲಧಿಕಾರಿಗಳ ಜೊತೆ ಮಾತನಾಡಿದರು. ಕಾಲುವೆಗೆ 800 ಕ್ಯುಸೆಕ್ ನೀರು ಹರಿಬಿಟ್ಟ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.ವೀರೇಂದ್ರ ಪಾಟೀಲ, ಭಾಗಪ್ಪಗೌಡ, ನೀಲಕಂಠ ಹೊಸಮನಿ, ಬಸಯ್ಯಸ್ವಾಮಿ, ನೀಲಕಂಠರಾಯಗೌಡ ವಣಕ್ಯಾಳ ಇದ್ದರು.***

ಜೇವರ್ಗಿ ಶಾಖಾ ಕಾಲುವೆಗೆ 300 ಕ್ಯುಸೆಕ್‌ ನೀರು ಹರಿಸಲಾಗುತ್ತಿತ್ತು, ರೈತರೊಟ್ಟಿಗೆ ಸೇರಿ ಪ್ರತಿಭಟನೆ ನಡೆಸಿದ್ದರಿಂದ 800 ಕ್ಯುಸೆಕ್‌ ನೀರು ಬಿಟ್ಟಿದ್ದಾರೆ.

-ಯಮನಪ್ಪಗೌಡ, ರೈತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.