ಉಪಚುನಾವಣೆ: ಶೇ 78 ರಷ್ಟು ಮತದಾನ

ಭಾನುವಾರ, ಮೇ 26, 2019
28 °C

ಉಪಚುನಾವಣೆ: ಶೇ 78 ರಷ್ಟು ಮತದಾನ

Published:
Updated:
ಉಪಚುನಾವಣೆ: ಶೇ 78 ರಷ್ಟು ಮತದಾನ

ಹರಪನಹಳ್ಳಿ: ಸ್ಥಳೀಯ ಪುರಸಭೆಯ ದಿವಂಗತ ಸದಸ್ಯ ಹುಲುಮನಿ ಬುಡೇನ್ ಸಾಬ್ ನಿಧನದಿಂದ ತೆರವಾದ ಸ್ಥಾನಕ್ಕೆ ಭಾನುವಾರ ನಡೆದ ಉಪ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ. 78.56ರಷ್ಟು ಅತ್ಯಧಿಕ ಮತದಾನ ನಡೆದಿದೆ.ಪಟ್ಟಣದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ, ವಾರ್ಡ್ ವ್ಯಾಪ್ತಿಯ 1,115ಮತದಾರರು ಪೈಕಿ, 460ಪುರುಷ ಹಾಗೂ 416ಮಹಿಳಾ ಮತದಾರರು ಸೇರಿದಂತೆ ಒಟ್ಟು 876ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ಮತದಾನಕ್ಕೆ ಉತ್ಸುಕತೆ ತೋರಿಸಿ, ಮತಗಟ್ಟೆಯ ಬಳಿ ಮತದಾರರು ಸಾಲುಗಟ್ಟಿ ನಿಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆಗೊಮ್ಮೆ-ಈಗೊಮ್ಮೆ ಸುರಿಯುತ್ತಿದ್ದ ತುಂತುರು ಹನಿ, ಮತದಾರರನ್ನು ಚದುರಿಸುತ್ತಿದ್ದಾರೂ, ಮತದಾನದ ಉತ್ಸಾಹಕ್ಕಂತೂ ಯಾವುದೇ ರೀತಿಯ ಅಡಚಣೆ ಉಂಟುಮಾಡಲಿಲ್ಲ.ಕಾಂಗ್ರೆಸ್ ಪಕ್ಷದ ಕಳ್ಳಿಬಾವಿ ಹಜಮತ್‌ಉಲ್ಲಾ ಸಾಬ್, ಜೆಡಿಎಸ್‌ನ ರಹಮತ್ ಉಲ್ಲಾ ಹಾಗೂ ಆಡಳಿತಾರೂಢ ಬಿಜೆಪಿಯಿಂದ ದಿವಂಗತ ಸದಸ್ಯರ ಪತ್ನಿ ಗುಲ್ನಾರ ಖಾನಂ ಸ್ಪರ್ಧಿಸಿದ್ದರೆ, ಮೂರು ಪಕ್ಷಗಳ ಪಾಲಿಗೂ ಸವಾಲ್‌ವೊಡ್ಡಿ ಶಾಸಕ ಬಿ. ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿ ಡಿ. ಜಾಹುರ್ ಕಣಕ್ಕಿಳಿದಿದ್ದಾರೆ.ಚುನಾವಣಾ ಫಲಿತಾಂಶ ಆ. 8ರಂದು ಹೊರಬೀಳಲಿದೆ.

ಉಪ ವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು, ಡಿವೈಎಸ್‌ಪಿ ಎಚ್.ಆರ್. ರಾಧಾಮಣಿ ಹಾಗೂ ತಹಶೀಲ್ದಾರ್ ಕೆ. ಮಲ್ಲಿನಾಥ ಮತಗಟ್ಟೆಗೆ ಭೇಟಿ ನೀಡಿ ಮುಕ್ತ ಹಾಗೂ ಶಾಂತಿಯುತ ಮತದಾನದ ಪರಿಶೀಲನೆ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry