ಗುರುವಾರ , ನವೆಂಬರ್ 14, 2019
22 °C

ಉಪನಾಯಕ ಸ್ಥಾನಕ್ಕೆ ವಾಟ್ಸನ್ ರಾಜೀನಾಮೆ

Published:
Updated:

ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಸ್ಥಾನಕ್ಕೆ ಶೇನ್ ವಾಟ್ಸನ್ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ರನ್ ಮತ್ತು ಹೆಚ್ಚು ವಿಕೆಟ್ ಗಳಿಸುವತ್ತ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.ಕಳೆದ ತಿಂಗಳು ಭಾರತ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಉಪನಾಯಕರಾಗಿದ್ದ ವಾಟ್ಸನ್ ಅವರನ್ನು ಶಿಸ್ತು ಕ್ರಮ ಉಲ್ಲಂಘನೆಗಾಗಿ ತಂಡದ ಆಡಳಿತ ಮಂಡಳಿ ಒಂದು ಪಂದ್ಯದಿಂದ ಹೊರಗಿಟ್ಟಿತ್ತು. ಇದಾದ ಒಂದು ತಿಂಗಳ ಬಳಿಕ ಅವರು ಉಪನಾಯಕ ಸ್ಥಾನದಿಂದ ಹಿಂದೆ ಸರಿದಿದ್ದಾರೆ.ತಮ್ಮ ನಿರ್ಧಾರ ಕುರಿತು ಶನಿವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ ವಾಟ್ಸನ್, `ಉಪನಾಯಕ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಸುಲಭವಾಗಿರಲಿಲ್ಲ. ಆದರೆ, ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿ ಮುಗಿದ ದಿನದಿಂದಲೂ ನಾನು ಈ ಬಗ್ಗೆ ಚಿಂತಿಸಿದ್ದೆ. ಇದು ನನಗೆ ಮತ್ತು ತಂಡಕ್ಕೆ ಬದಲಾವಣೆಗೆ ಸೂಕ್ತ ಸಮಯ ಎಂದು ಭಾವಿಸಿದ್ದೇನೆ. ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ನನ್ನ ನಿರ್ಧಾರವನ್ನು ತಿಳಿಸಿದ್ದೇನೆ' ಎಂದು ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಉತ್ತಮ ಆಟಗಾರ ಆಗುವತ್ತ ಗಮನ ಕೇಂದ್ರೀಕರಿಸುವುದಾಗಿ ವಾಟ್ಸನ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)