ಉಪನಿರ್ದೇಶಕರಿಗೆ ವಿದ್ಯಾರ್ಥಿಗಳ ಮುತ್ತಿಗೆ

7

ಉಪನಿರ್ದೇಶಕರಿಗೆ ವಿದ್ಯಾರ್ಥಿಗಳ ಮುತ್ತಿಗೆ

Published:
Updated:

ಕವಿತಾಳ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಸ್ಥಳಕ್ಕೆ ಆಗಮಿಸಿದ ಕಾಲೇಜು ಶಿಕ್ಷಣ ಪ್ರಭಾರ ಉಪನಿರ್ದೇಶಕ ಎಸ್‌.ಎಸ್‌.­ಹಿರೇಮಠ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಪಿಯುಸಿಯಲ್ಲಿ ವಾಣಿಜ್ಯ, ವಿಜ್ಞಾನ ವಿಭಾಗ ಮತ್ತು ಪದವಿ ಕಾಲೇಜು ಆರಂಭಿಸಬೇಕು, ಕಟ್ಟಡ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ಮತ್ತು ಆರ್‌ವೈಎಫ್‌ಐ ಬೆಂಬಲ­ದೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡರೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು.ಕೆಲವೇ ವರ್ಷಗಳ ಹಿಂದೆ ನಿರ್ಮಿಸಿದ ಪಿಯು ಕಾಲೇಜು ಕಟ್ಟಡ ಸೋರುತ್ತಿದ್ದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕಟ್ಟಡವನ್ನು ಇದುವರೆಗೂ ಇಲಾಕೆ ವಹಿಸಿಕೊಂಡಿಲ್ಲ ಹೀಗಾಗಿ ಕಾಮಗಾರಿ ನಿರ್ವಹಿಸಿದ ಲೊಕೋಪಯೋಗಿ ಇಲಾ­ಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳು­ವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ವಾಣಿಜ್ಯ, ವಿಜ್ಞಾನ ವಿಭಾಗ ಮತ್ತು ಪದವಿ ಕಾಲೇಜು ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾ­ಗುವುದು, ಶೌಚಾಲಯ ನಿರ್ಮಾಣ ಮಾಡಲು ಅನುದಾನದ ಬಗ್ಗೆ ಶಾಸಕ­ರೊಂದಿಗೆ ಚರ್ಚಿಸಲಾಗುವುದು ಮತ್ತು ವಿದೇಶದಲ್ಲಿರುವ ಇಂಗ್ಲೀಷ್‌ ಉಪನ್ಯಾಸಕಿ ವಿರುದ್ದ ಕ್ರಮ ಕೈಗೊಳ್ಳು­ವುದಾಗಿ ತಿಳಿಸಿದರು.ಉಪ ತಹಸೀಲ್ದಾರ ಮೋಹನ್‌, ಸಬ್‌ ಇನ್ಸ್‌ಪೆಕ್ಟರ್‌ ರವಿ ಉಕ್ಕುಂದ ಇದ್ದರು. ಸಂಘಟನೆಯ ಸಣ್ಣಯ್ಯ ಹಿರೇಮಠ, ರಂಗನಾಥ, ಬಸವರಾಜ ಕವಿತಾಳ, ಮೇಷಕ್‌ ಡಿ ಸಿರವಾರ, ರಮೇಶ, ರುಕ್ಮುದ್ದೀನ್‌, ರಫಿ, ಬಸವರಾಜ ಹಿಂದಿನಮನಿ ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry