ಮಂಗಳವಾರ, ಮೇ 17, 2022
23 °C

ಉಪನ್ಯಾಸಕನ ಮೇಲೆ ಹಲ್ಲೆ:ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಸ್ಥಳೀಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಮತ್ತು ಸಿಬ್ಬಂದಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ರಾಯಚೂರು ಮೂಲದ ನಾಲ್ವರು ಉಪನ್ಯಾಸಕ ಚೆನ್ನಬಸವ ಚಿಲ್ಕಾರಾಗಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರಿಂದ ತೀವ್ರಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸ್ಥಳದಲ್ಲಿಯೆ ಇದ್ದ ಆರೋಪಿತರನ್ನು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಪೊಲೀಸ್ ವಶಕ್ಕೆ ಒಪ್ಪಿಸಿದ ಪ್ರಕರಣವೊಂದು ವರದಿಯಾಗಿದೆ.ಕಾಲೇಜಿಗೆ ಬಂದಿರುವ ಅನುದಾನ ತಮಗೆ ಕೊಡಬೇಕು. ಅನುದಾನದ ಬಗ್ಗೆ ಟೆಂಡರ್ ಕರೆದರು ಕೂಡ ಮಾಹಿತಿ ನಮಗೆ ಕೊಡಬೇಕು ಎಂಬಿತ್ಯಾದಿ ವಿಷಯಗಳಿಗೆ ಸಂಬಂಧಿಸಿ ಪ್ರಾಚಾರ್ಯ ಡಿ.ವಾಯ್ ರಡ್ಡೆರ್ ಅವರೊಂದಿಗೆ ಏಕಾ ಏಕಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನೂಕಾಟ ಆರಂಭಿಸಿದರು.ಮಧ್ಯ ಪ್ರವೇಶಿಸಿದ ಚಿಲ್ಕಾರಾಗಿ ಉಪನ್ಯಾಸಕರು ಗೌರವಯುತವಾಗಿ ವರ್ತಿಸುವಂತೆ ಹೇಳಿದಾಗ ಸ್ಟೆಪಲರ್‌ದಿಂದ ತಲೆಗೆ ಜಜ್ಜಿ ತೀವ್ರಗಾಯಗೊಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಆರೋಪ: ಪ್ರಾಚಾರ್ಯ ಡಿ.ವಾಯ್ ರಡ್ಡೆರ್ ಅವರು ನೀಡಿದ ದೂರಿನ ಮೇಲೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ದೀಪಕ್ ಭೂಸರೆಡ್ಡಿ ಪ್ರಕರಣ ದಾಖಲಿಸಿಕೊಂಡು ಆರೋಪಿತರಾದ ಪದ್ಮವರ್ಧನ ನಾರಾಯಣ ವಕೀಲರು, ಜೆ.ರಾಜೇಶ ಜಮುನಾದಾಸ್, ಚಂದ್ರಕಾಂತ ಅಮರಣ್ಣ ವಕೀಲರು ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಟ್ಟಿರುವುದನ್ನು ಪೊಲೀಸ್ ಮೂಲಗಳು ದೃಢಪಡಿಸಿವೆ.ಪ್ರತ್ಯಾರೋಪ: ಕಾಲೇಜು ಅನುದಾನ ದರ್ಬಳಕೆ ಮಾಡಿಕೊಂಡ ಬಗ್ಗೆ ಜಿಲ್ಲಾ ಮಾನವ ಹಕ್ಕುಗಳ ಸಂಘಟನೆ ಜಿಲ್ಲಾಧ್ಯಕ್ಷ ಚಂದ್ರಕಾಂತ ವಕೀಲರ ನೇತೃತ್ವದಲ್ಲಿ ಮಾಹಿತಿ ಕೇಳಲು ಬಂದಿದ್ದೆವು. ಆಗ ಪ್ರಾಚಾರ್ಯರು ಮತ್ತು ಉಪನ್ಯಾಸಕ ವಾಗ್ವಾದ ನಡೆಸಿ ಜಾತಿ ನಿಂದನೆ ಮಾಡಿದರು ಎಂದು ದೂರು ನೀಡಿದ್ದರಿಂದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ದೀಪಕ್ ಭೂಸರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.