ಉಪನ್ಯಾಸಕರ ಜೇಷ್ಠತಾ ಪಟ್ಟಿ ಬಿಡುಗಡೆ

ಬುಧವಾರ, ಜೂಲೈ 17, 2019
27 °C

ಉಪನ್ಯಾಸಕರ ಜೇಷ್ಠತಾ ಪಟ್ಟಿ ಬಿಡುಗಡೆ

Published:
Updated:

ಬಾಗಲಕೋಟೆ: ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ ಪ್ರಾಂಶುಪಾಲರ ಹುದ್ದೆಗಳ ಭರ್ತಿಗಾಗಿ ಪದವಿ ಪೂರ್ವ ಹಾಗೂ ವೃತ್ತಿಶಿಕ್ಷಣ ಇಲಾಖೆಯು ಹಿರಿಯ ಉಪನ್ಯಾಸಕರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಉಪನ್ಯಾಸಕರ ಜೇಷ್ಠತಾ ಸಂಖ್ಯೆಯು ಪಟ್ಟಿ 1ರಲ್ಲಿ 3128ರಿಂದ 3327ರವರೆಗೆ, ಪಟ್ಟಿ 2ರಲ್ಲಿ 3522ರಿಂದ 3653ರವರೆಗೆ ಹಾಗೂ 3706ರಿಂದ 3707ರವರೆಗೆ ಇವೆ.ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಜೇಷ್ಠತಾ ಸಂಖ್ಯೆ 4693ರಿಂದ 4805ರವರೆಗೆ ಹಾಗೂ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 3158ರಿಂದ 4790ರವರೆಗೆ ಇವೆ.ಅದೇ ರೀತಿ ಎ.ಮಹದೇವಯ್ಯ ಮತ್ತು ಗವಿಸಿದ್ದಪ್ಪ ಬಿ. ಪೂಜಾರ ಅವರ ಹೆಸರುಗಳೂ ಪಟ್ಟಿಯಲ್ಲಿವೆ.ಜೇಷ್ಠತಾ ಪಟ್ಟಿಯಲ್ಲಿರುವ ಉಪನ್ಯಾಸಕರು 2006-07ರಿಂದ 2010-11ರವರೆಗಿನ ಕಾರ್ಯ ನಿರ್ವಹಣಾ ವರದಿ, ಇಲಾಖಾ ಪರೀಕ್ಷೆ ಪಾಸಾಗಿರುವ ದಾಖಲೆ ಪ್ರತಿ, ಇಲಾಖಾ ವಿಚಾರಣೆ ಬಾಕಿ ಇರುವ/ಇಲ್ಲದಿರುವ ಪ್ರತಿಗಳನ್ನು ಕ್ರೋಡೀಕರಿಸಿ ಪ.ಪೂ.ಇಲಾಖೆಯ ಉಪನಿರ್ದೇಶ ಕರ ಕಚೇರಿಯಲ್ಲಿ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.ಪರಿಸರ ದಿನದಂದೇ ಮರಕ್ಕೆ ಕೊಡಲಿ ಏಟು

ಬನಹಟ್ಟಿ:
ವಿಶ್ವಪರಿಸರ ದಿನವಾದ ಭಾನುವಾರ ನಗರದ ಮುಖ್ಯ ಬೀದಿಯಲ್ಲಿನ ಎರಡು ಟೆಂಗಿನ ಗಿಡಗಳನ್ನು ಬೇರು ಸಹಿತ ಕಡಿದು ಹಾಕಲಾಯಿತು.ನಗರದ ತಮ್ಮಣ್ಣಪ್ಪ ಚಿಕ್ಕೋಡಿ ರಸ್ತೆಯಂಚಿನ ಎರಡು ಬಲಿಷ್ಠ ತೆಂಗಿನ ಮರಗಳನ್ನು ಹಾಡುಹಗಲೇ ಕಡಿದು ಹಾಕಿದ್ದನ್ನು ನಗರಸಭೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ತಡೆಯದಿರುವುದನ್ನು ನಾಗರಿಕ ಹಿತರಕ್ಷಣಾ ವೇದಿಕೆ ಖಂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry