ಸೋಮವಾರ, ಜೂನ್ 21, 2021
20 °C

ಉಪನ್ಯಾಸಕರ ನೇಮಕಾತಿ ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವರಿಯಲ್ಲಿ ನಮ್ಮ ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಶೀಘ್ರದಲ್ಲೇ 1765 ಪಿ.ಯು ಕಾಲೇಜು ಉಪನ್ಯಾಸಕರು ಹಾಗೂ 1500 ಪದವಿ ಕಾಲೇಜು ಉಪನ್ಯಾಸಕರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದ್ದರಲ್ಲದೆ ಸದ್ಯದಲ್ಲೇ ನೇಮಕಾತಿ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿದ್ದರು.

 

ಆದರೆ  ಇದುವರೆಗೆ ಅಧಿಸೂಚನೆ ಹೊರಬಿದ್ದಿಲ್ಲ. ಎಂ.ಎ, ಎಂ.ಎಸ್‌ಸಿ, ಎಂ.ಎಡ್, ಎಂ.ಫಿಲ್, ಪಿ.ಎಚ್.ಡಿ, ಎನ್‌ಇಟಿ ಪಾಸಾದ ಸಾವಿರಾರು ಅಭ್ಯರ್ಥಿಗಳು   ಅಧಿಸೂಚನೆಗಾಗಿ ಕಾದು ಕುಳಿತಿದ್ದಾರೆ. ಇವರಲ್ಲಿ ಅನೇಕರ ವಯೋಮಿತಿ ಮಿತಿ ಮೀರುತ್ತಿದೆ.ಇನ್ನು ಒಂದೆರಡು ತಿಂಗಳಲ್ಲಿ ನೂತನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ. ಮೂರು ಸಾವಿರಕ್ಕೂ ಹೆಚ್ಚು ಶಿಕ್ಷರಿಲ್ಲದೆ ಕಾಲೇಜುಗಳನ್ನು ಹೇಗೆ ನಡೆಸುತ್ತಾರೆ. ವಿದ್ಯಾರ್ಥಿಗಳ ಭವಿಷ್ಯದ ಗತಿ ಏನು? ಇದನ್ನೆಲ್ಲ ಶಿಕ್ಷಣ ಸಚಿವರು ಯೋಚಿಸಿದಂತೆ ಕಾಣುತ್ತಿಲ್ಲ.

ಇದನ್ನು ಪರಿಗಣಿಸಿ ಶಿಕ್ಷಣ ಸಚಿವರು ಮತ್ತು ಸರ್ಕಾರ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ  ಚಾಲನೆ ನೀಡುವರೇ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.