ಉಪನ್ಯಾಸಕರ ನೇಮಕ: ಆಶಾಕಿರಣ

7

ಉಪನ್ಯಾಸಕರ ನೇಮಕ: ಆಶಾಕಿರಣ

Published:
Updated:

ಉನ್ನತ ಶಿಕ್ಷಣ ಸಚಿವರು ಇತ್ತೀಚೆಗೆ ಪದವಿ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿರುವುದು ಸ್ವಾಗತಾರ್ಹ ಬೆಳವಣಿಗೆ. ಪದವಿ ಕಾಲೇಜು ಉಪನ್ಯಾಸಕರಂತಹ ಅತ್ಯುನ್ನತ ಹುದ್ದೆಗಳು ಕೆ.ಪಿ.ಎಸ್.ಸಿ.ಯ ಭ್ರಷ್ಟಾಚಾರಪೂರಿತ ನೇಮಕಾತಿಯಿಂದ ನಮ್ಮಂತಹ ಸಾಮಾನ್ಯ ವರ್ಗದವರಿಗೆ ಗಗನಕುಸುಮವಾಗಿದ್ದವು.

ಈಗ ಆರ್.ವಿ. ದೇಶಪಾಂಡೆಯವರ ಹೇಳಿಕೆ ನಮ್ಮಂತಹ ಅನೇಕ ಸ್ನಾತಕೋತ್ತರ ಪದವೀಧರರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಈ ನಿರ್ಧಾರದಿಂದ ಸರ್ಕಾರ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು.

-ಧನಂಜಯಮೂರ್ತಿ ಜಿ.ಎನ್., ಕೆ. ಗೊಲ್ಲರಹಳ್ಳಿ, ಕಡೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry