ಉಪನ್ಯಾಸಕ ವರ್ಗಾವಣೆ ರದ್ದತಿಗೆ ಒತ್ತಾಯ

7

ಉಪನ್ಯಾಸಕ ವರ್ಗಾವಣೆ ರದ್ದತಿಗೆ ಒತ್ತಾಯ

Published:
Updated:

ರಾಯಚೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಗೌಡಪ್ಪ ಅವರ ವರ್ಗಾವಣೆ ರದ್ದುಪಡಿಸಬೇಕೆಂದು ಒತ್ತಾಯಿಸಿ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಷಯ ಉಪನ್ಯಾಸಕ ಗೌಡಪ್ಪ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಖಂಡನೀಯ. ಗೌಡಪ್ಪ ಅವರನ್ನು ವರ್ಗಾವಣೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತೊಂದರೆಯಾಗಿದೆ ಎಂದರು.ಸರ್ಕಾರಿ ಕಾಲೇಜಿನ ವಾಣಿಜ್ಯ ವಿಷಯ ಉಪನ್ಯಾಸಕ ಗೌಡಪ್ಪ ಅವರ ವರ್ಗಾವಣೆ ರದ್ದುಪಡಿಸಬೇಕು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳ ಹೋರಾಟ ತೀವ್ರಗೊಳಿಸಲಾಗುವುದು ಎಂದು ವಿದ್ಯಾರ್ಥಿಗಳಾದ ನರಸಿಂಹಲು, ಶಿವಗೌಡ ಪಟೇಲ್, ಗೋವರ್ದನ, ಪ್ರಶಾಂತ, ರಮೇಶ, ಪ್ರಭು, ತಿರುಪತಿ, ಅಜರ್ ಹುಸೇನ್, ನಯೀಮ್ ಪಾಷಾ, ವಸಂತಲಕ್ಷ್ಮಿ, ಸ್ನೇಹ, ಪಾವನಿ, ರೇಖಾ, ಚನ್ನಬಸವಮ್ಮ, ಸುಮಲತಾ, ಬಸಮ್ಮ , ಬಷೀರಾ, ರೆಷ್ಮಾ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry