ಶುಕ್ರವಾರ, ಏಪ್ರಿಲ್ 16, 2021
31 °C

ಉಪರಾಷ್ಟ್ರಪತಿಯಾಗಿ ಹಮೀದ್ ಅನ್ಸಾರಿ ಪುನರಾಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಯುಪಿಎ ಅಭ್ಯರ್ಥಿ ಹಮೀದ್ ಅನ್ಸಾರಿ ಅವರು ಮಂಗಳವಾರ  ಉಪರಾಷ್ಟ್ರಪತಿಯಾಗಿ ಪುನರಾಯ್ಕೆಯಾಗಿದ್ದಾರೆ. ಇದರೊಂದಿಗೆ ಸತತವಾಗಿ ಎರಡನೇ ಅವಧಿಗೆ  ಉಪರಾಷ್ಟ್ರಪತಿ ಸ್ಥಾನ ಅಲಂಕರಿಸುತ್ತಿರುವ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.ಅನ್ಸಾರಿ ಅವರು ತಮ್ಮ ಪ್ರತಿಸ್ಪರ್ಧಿ ಎನ್ ಡಿ ಎ ಅಭ್ಯರ್ಥಿ ಜಸ್ವಂತ್ ಸಿಂಗ್ ಅವರನ್ನು 252 ಮತಗಳ ಭಾರೀ ಅಂತರದಲ್ಲಿ ಪರಾಭವಗೊಳಿಸಿದರು.75ರ ರ ಹರೆಯದ ಅನ್ಸಾರಿ ಅವರು 736 ಮತಗಳ ಪೈಕಿ 490 ಮತಗಳನ್ನು ಗಳಿಸಿದರೆ ಜಸ್ವಂತ್ ಸಿಂಗ್ ಅವರು 238 ಮತಗಳನ್ನು ಗಳಿಸಿದರು.ಮತದಾನದ ಅರ್ಹತೆ ಹೊಂದಿದ್ದ 787 ಸಂಸತ್ ಸದಸ್ಯರ ಪೈಕಿ 47 ಮಂದಿ ಸಂಸತ್ ಸದಸ್ಯರು ಮತದಾನ ಮಾಡಿರಲಿಲ್ಲ. ಚೆನ್ನೈ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಸಚಿವ ವಿಲಾಸರಾವ್ ದೇಶಮುಖ್ ಅವರಿಗೂ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ.1952-1962ರ ಅವಧಿಯಲ್ಲಿ ಎಸ್. ರಾಧಾಕೃಷ್ಣನ್ ಅವರು ಸತತವಾಗಿ ಎರಡು ಅವಧಿಗೆ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.