ಶುಕ್ರವಾರ, ನವೆಂಬರ್ 15, 2019
21 °C

ಉಪವಾಸ ಅಂತ್ಯ

Published:
Updated:

ಹೈದರಾಬಾದ್ (ಪಿಟಿಐ): ವಿದ್ಯುತ್ ದರ ಹೆಚ್ಚಳವನ್ನು ವಿರೋಧಿಸಿ ಅನಿರ್ದಿಷ್ಟಾವಧಿಯ ಉಪವಾಸ ಕೈಗೊಂಡಿದ್ದ ವೈಎಸ್‌ಆರ್ ಕಾಂಗ್ರೆಸ್ ನಾಯಕರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಕಳೆದ ಐದು ದಿನಗಳಿಂದ ಉಪವಾಸ ಮಾಡುತ್ತಿರುವ ವೈಎಸ್‌ಆರ್ ಕಾಂಗ್ರೆಸ್ ಗೌರವ ಅಧ್ಯಕ್ಷೆ ಎಸ್. ವಿಜಯಮ್ಮ ಸೇರಿದಂತೆ ಉಳಿದ ಮುಖಂಡರನ್ನು ರಾತ್ರಿ ಆಸ್ಪತ್ರೆಗೆ ದಾಖಲಿಸಿದಾಗ ಅವರು ತಮ್ಮ ಉಪವಾಸವನ್ನು ಆಸ್ಪತ್ರೆಯಲ್ಲೇ ಅಂತ್ಯಗೊಳಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)