ಉಪಹಾರ್ ಬೆಂಕಿ ದುರಂತ: ಪರಿಹಾರ ಮೊತ್ತ ಕಡಿತ

7

ಉಪಹಾರ್ ಬೆಂಕಿ ದುರಂತ: ಪರಿಹಾರ ಮೊತ್ತ ಕಡಿತ

Published:
Updated:

ನವದೆಹಲಿ (ಪಿಟಿಐ): ಸುಮಾರು ಹದಿನೈದು ವರ್ಷಗಳ ಹಿಂದೆ ದಕ್ಷಿಣ ದೆಹಲಿಯ ಉಪಹಾರ್ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಬೆಂಕಿ ದುರಂತದಲ್ಲಿ ಗಾಯಗೊಂಡ ಮತ್ತು ಮೃತಪಟ್ಟವರ ಕುಟುಂಬಗಳಿಗೆ ನೀಡಬೇಕಾಗಿದ್ದ ಪರಿಹಾರದ ಮೊತ್ತಕ್ಕೆ ಸುಪ್ರೀಂಕೋರ್ಟ್ ಗುರುವಾರ ಕತ್ತರಿ ಹಾಕಿದೆ.

ದೆಹಲಿ ಹೈಕೋರ್ಟ್ ಆದೇಶಿಸಿದ್ದ ಪರಿಹಾರದ ಮೊತ್ತವನ್ನು ಬಹುತೇಕ ಅರ್ಧದಷ್ಟು ಕಡಿತಗೊಳಿಸಿ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಆದೇಶ ಹೊರಡಿಸಿದ್ದಾರೆ. 

ದುರಂತದಲ್ಲಿ ಮೃತಪಟ್ಟ 20 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳ ಕುಟುಂಬದವರಿಗೆ ನೀಡಲು ಆದೇಶಿಸಲಾಗಿದ್ದ 18 ಲಕ್ಷ ರೂಪಾಯಿ ಪರಿಹಾರದ ಮೊತ್ತವನ್ನು 10 ಲಕ್ಷ ರೂಪಾಯಿಗೆ ಕಡಿತಗೊಳಿಸಲಾಗಿದೆ. ಅದರಂತೆ 20 ವರ್ಷ ಕೆಳಗಿನವರ ಕುಟುಂಬಗಳಿಗೆ ನೀಡಲಾಗಿದ್ದ 15 ಲಕ್ಷದ ಪರಿಹಾರವನ್ನು 7.5 ಲಕ್ಷ ರೂಪಾಯಿಗೆ ಇಳಿಸಲಾಗಿದೆ.

ಈ ಘಟನೆಯಲ್ಲಿ 59 ಮಂದಿ ಮೃತರಾಗಿದ್ದರು. ಕೋರ್ಟ್ ಆದೇಶದಿಂದ ಸಂತ್ರಸ್ತ ಕುಟುಂಬಗಳಿಗೆ ತೀವ್ರ ಆಘಾತ ಮತ್ತು ಹಿನ್ನಡೆಯಾಗಿದ್ದು, ಇದು ಅತ್ಯಂತ ನಿರಾಶಾದಾಯಕವಾದ ತೀರ್ಪು ಎಂದು ಪ್ರತಿಕ್ರಿಯಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry