ಶನಿವಾರ, ಮೇ 15, 2021
24 °C

ಉಪೇಂದ್ರ, ಶ್ರುತಿ ಜನ್ಮದಿನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಉಪೇಂದ್ರ ಹಾಗೂ ಶ್ರುತಿ ತಮ್ಮ ಜನ್ಮದಿನವನ್ನು ಭಾನುವಾರ ಆಚರಿಸಿಕೊಂಡರು. ಭಾನುವಾರ ಚಿತ್ರೀಕರಣದಲ್ಲಿ ಭಾಗಿಯಾಗದೆ ಸ್ವಗೃಹದಲ್ಲಿ ನಟ ಉಪೇಂದ್ರ ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿದರು.ಚಿತ್ರೀಕರಣವೊಂದರಲ್ಲಿ ಭಾಗವಹಿಸಿದ್ದ ನಟಿ ಶ್ರುತಿ ಅವರ ಜನ್ಮ ದಿನಾಚರಣೆಯನ್ನು ಚಿತ್ರೀಕರಣ ತಂಡ ಕೇಕ್ ಹಂಚುವ ಮೂಲಕ ಆಚರಿಸಿತು. ನಿರ್ಮಾಪಕ ನಂದಕಿಶೋರ್, ನಟಿ ಐಶ್ವರ್ಯ ನಾಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ನಗರದ ಯಶವಂತಪುರ, ಬನಶಂಕರಿ, ಗುರ್‌ಗುಂಟೆನಪಾಳ್ಯ ಸೇರಿದಂತೆ ಹಲವೆಡೆ ಅಭಿಮಾನಿಗಳು ಉಪೇಂದ್ರ ಅವರ ಬೃಹತ್ ಕಟೌಟ್ ನಿರ್ಮಿಸಿ ಹೂವಿನ ಹಾರ ಹಾಕಿ, ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.