ಉಪ್ಪಾರ, ಕುಂಬಾರ ಸಂಘಕ್ಕೆ ನಿವೇಶನ:ಸ್ಪಷ್ಟನೆ

ಮಂಗಳವಾರ, ಜೂಲೈ 23, 2019
20 °C

ಉಪ್ಪಾರ, ಕುಂಬಾರ ಸಂಘಕ್ಕೆ ನಿವೇಶನ:ಸ್ಪಷ್ಟನೆ

Published:
Updated:

ಮೈಸೂರು: `ಮುಡಾ ಮತ್ತು ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ~ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ ಆಯುಕ್ತ) ಡಾ.ಸಿ.ಜಿ.ಬೆಟಸೂರಮಠ ಅವರು ಸ್ಪಷ್ಟನೆ ನೀಡಿದ್ದಾರೆ.`ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ಅಧಿಕಾರಿಗಳನ್ನು ಒಳಗೊಂಡಂತೆ ಕುಂಬಾರ ಹಾಗೂ ಉಪ್ಪಾರ ಸಂಘಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಪ ಸಮಿತಿಗಳನ್ನು ರಚಿಸಿದ್ದು, ಸಮಿತಿಯು ಈ ಹಿಂದೆ ಸಮಾವೇಶಗೊಂಡು ಸಭೆ ನಡೆಸಿದೆ. ಈ ವಿಷಯದಲ್ಲಿ ಸಮಿತಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ ಹೊರತು ಯಾವುದೇ ಅಧಿಕಾರಿ ತೀರ್ಮಾನ ತೆಗೆದುಕೊಳ್ಳಲು ಅವಕಾಶ ಇಲ್ಲ~ ಎಂದು ತಿಳಿಸಿದ್ದಾರೆ.`ಜೂ.3ರಂದು ಮಾಹಿತಿಯನ್ನು ಕೇಳಿದ್ದು, ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಮಾಹಿತಿ ನೀಡಲು 30 ದಿನಗಳ ಕಾಲಾವಕಾಶ ಇದೆ. ಆದರೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಆಪಾದನೆ ಮಾಡಿರುವುದು ಸತ್ಯಕ್ಕೆ ದೂರವಾಗಿದೆ. ಸತ್ಯಾಂಶ ಮರೆಮಾಚಿ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವಂತೆ ಹೇಳಿಕೆ ನೀಡುವುದರಿಂದ ಅಧಿಕಾರಿಗಳ ನೈತಿಕತೆಗೆ ಧಕ್ಕೆ ಉಂಟಾಗುತ್ತದೆ~ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry