ಉಪ್ಪಿನಂಗಡಿಯಲ್ಲಿ ಫೆ. 1ರಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

7

ಉಪ್ಪಿನಂಗಡಿಯಲ್ಲಿ ಫೆ. 1ರಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Published:
Updated:

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಿನ ವರ್ಷದ ಫೆಬ್ರವರಿ 1, 2 ಮತ್ತು 3ರಂದು ಉಪ್ಪಿನಂಗಡಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ದಿನ ನಿಗದಿ ಪಡಿಸಲಾಯಿತು.ಸಮ್ಮೇಳನದ ಸ್ವಾಗತಿ ಸಮಿತಿ ರಚಿಸಲಾಗಿ ಅಧ್ಯಕ್ಷರಾಗಿ ಧನ್ಯಕುಮಾರ್ ರೈ, ಗೌರವಾಧ್ಯಕ್ಷರಾಗಿ ಸವಣೂರು ಸೀತಾರಾಮ ರೈ, ಪ್ರಧಾನ ಕಾರ್ಯದರ್ಶಿಯಾಗಿ ಪುತ್ತೂರು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ವರದರಾಜ ಚಂದ್ರಗಿರಿ, ಸಂಚಾಲಕರಾಗಿ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ, ಕೋಶಾಧಿಕಾರಿಯಾಗಿ ಅಬ್ರಹಾಂ ವರ್ಗೀಸ್ ಅವರನ್ನು ಆಯ್ಕೆ ಮಾಡಲಾಯಿತು.ಉಳಿದಂತೆ ಉಪ ಸಮಿತಿಗಳನ್ನು ರಚಿಸಲಾಗಿದೆ. ಸ್ಮರಣ ಸಂಚಿಕೆ ಸಮಿತಿ ಸಂಚಾಲಕರಾಗಿ ಗಣರಾಜ ಕುಂಬ್ಳೆ, ಸಾಂಸ್ಕೃತಿಕ ಸಮಿತಿ-ಐ.ಕೆ. ಬೊಳುವಾರು, ಆಹಾರ ಸಮಿತಿ-ಕರುಣಾಕರ ಸುವರ್ಣ, ಮೆರವಣಿಗೆ-ಸೇಸಪ್ಪ ರೈ ರಾಮಕುಂಜ, ಸ್ವಯಂ ಸೇವಕ ಸಮಿತಿ-ರವೀಂದ್ರ ದರ್ಬೆ, ಸ್ಪರ್ಧಾ ಸಮಿತಿ-ಎಚ್. ಶ್ರಿಧರ ರೈ, ಸನ್ಮಾನ ಸಮಿತಿ-ಎ.ವಿ. ನಾರಾಯಣ, ಪ್ರದರ್ಶನ ಸಮಿತಿ-ಅಬೂಬಕ್ಕರ್ ಆರ್ಲಪದವು, ನೊಂದಾವಣೆ ಸಮಿತಿ-ಎನ್.ಕೆ. ಜಗನ್ನಿವಾಸ ರಾವ್.ಸಲಹಾ ಸಮಿತಿಗೆ ತಾಳ್ತಜೆ ವಸಂತಕುಮಾರ್, ಕಜೆ ಈಶ್ವರ ಭಟ್, ಶೇಷಶಯನ ಕಾರಿಂಜ, ಭಾಸ್ಕರ ಬಾರ‌್ಯ, ಕೆ.ಎಚ್.ದಾಸಪ್ಪ ರೈ, ಹರಿನಾರಾಯಣ ಮಾಡಾವು, ಜಯಾನಂದ ಪೆರಾಜೆ, ಪ್ರಸನ್ನ ಎಚ್.ಸಿ., ಗೋಪಾಲ ಹೆಗ್ಡೆ, ಡಾ.ಸುಬ್ರಹ್ಮಣ್ಯ ಭಟ್, ದುರ್ಗಾಪ್ರಸಾದ್ ರೈ ಕುಂಬ್ರ, ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ಡಾ.ವಿಜಯಕುಮಾರ್ ಮೊಳೆಯಾರ, ಪ್ರೇಮಲತಾ ರಾವ್ ಪುತ್ತೂರು, ಡಾ.ಕೆ.ಬಿ. ರಾಜಾರಾಂ, ಡಾ. ಗೋವಿಂದಪ್ರಸಾದ್ ಕಜೆ, ಮುಳಿಯ ಶ್ಯಾಂ ಭಟ್, ಗಂಗಾಧರ ಬೆಳ್ಳಾರೆ, ಬಿ.ವಿ. ಸೂರ‌್ಯನಾರಾಯಣ ಅವರನ್ನು ಆಯ್ಕೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry