ಉಪ್ಪಿನಂಗಡಿ: ಸುನ್ನಿ ಮಹಾಸಮ್ಮೇಳನ 19ರಿಂದ
ಪುತ್ತೂರು: ಸಮಸ್ತ ಉಲಮಾ ಒಕ್ಕೂಟದ 85ನೇ ವರ್ಷಾಚರಣೆಯ ಪ್ರಚಾರಾರ್ಥವಾಗಿ ‘ಪರಂಪರೆಯ ಉಳಿವು ಸಮಸ್ತದ ನಿಲುವು’ ಎಂಬ ಚಿಂತನೆಯಡಿ ಎರಡು ದಿನಗಳ ಸುನ್ನಿ ಮಹಾಸಮ್ಮೇಳನ ಹಾಗೂ ಆಧ್ಯಯನ ಶಿಬಿರ ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯ ಬಳಿ ಇದೇ 19 ಮತ್ತು 20ರಂದು ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮುಸ್ತಫಾ ಕೆಂಪಿ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 19ರಂದು ಬೆಳಿಗ್ಗೆ ಪುತ್ತೂರು ಮುದರ್ರಿಸ್ ಅಹದ್ ಪೂಕೋಯ ತಂಙಳ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದರು.
ಆತೂರು ಮುದರ್ರಿಸ್ ಇಬ್ರಾಹಿಂ ಅಲ್ಹಾದಿ ತಂಙಳ್ ಉದ್ಘಾಟಿಸುವರು. ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್ಮೆಂಟ್ ಅಸೋಶಿಯೇಷನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೆಜಾಲು ಅಧ್ಯಕ್ಷತೆ ವಹಿಸುವರು. ಬಳಿಕ ನಡೆಯಲಿರುವ ಅಧ್ಯಯನ ಶಿಬಿರದಲ್ಲಿ ‘ಸುನ್ನತ್ ಜಮಾಅತ್ ಮತ್ತು ಇತರ ಪ್ರಸ್ಥಾನಗಳು’ ಎಂಬ ವಿಷಯದ ಕುರಿತು ಅಬ್ದುಲ್ ಗಫೂರ್ ಅನ್ವರಿ ಹಾಗೂ ‘ಸುನ್ನತ್ ಮತ್ತು ಬಿದ್ಅತ್’ ವಿಷಯದ ಕುರಿತು ಹಾಜಿ ಯೂಸುಫ್ ಮುಸ್ಲಿಯಾರ್ ವಿಚಾರ ಮಂಡಿಸುವರು ಎಂದು ಅವರು ಹೇಳಿದರು.
20ರಂದು ನಡೆಯಲಿರುವ ಅಧ್ಯಯನ ಶಿಬಿರದಲ್ಲಿ ‘ಮದ್ಹಬ್ ಮತ್ತು ತಖ್ಲೀದ್’ ವಿಷಯದ ಕುರಿತು ಕೇರಳದ ಅಬ್ದುಲ್ ಹಮೀದ್ ಫೈಝಿ ವಿಚಾರ ಮಂಡಿಸುವರು. ಸಮಸ್ತ ಸಂಘಟನೆಯ ಅಗಲಿದ ಉಲಮಾ ಶಿರೋಮಣಿಗಳ ಅನುಸ್ಮರಣಾ ಕಾರ್ಯಕ್ರಮ ಮಾಡನ್ನೂರು ಮುದರ್ರಿಸ್ ಝೈನುಲ್ ಆಬಿದೀನ್ ಜೆಫ್ರಿ ತಂಙಳ್ ನೇತೃತ್ವದಲ್ಲಿ ನಡೆಯಲಿದೆ. ಕೆಂದ್ರ ಸಮಸ್ತ ಮುಶಾವರ ಸದಸ್ಯ ತಾಯಲಂಗಾಡಿ ಎಂ. ಎ. ಖಾಸಿಂ ಮುಸ್ಲಿಯಾರ್ ಅನುಸ್ಮರಣಾ ಭಾಷಣ ಮಾಡುವರು ಎಂದು ಅವರು ತಿಳಿಸಿದರು.
ಅಂದು ಸಂಜೆ ನಡೆಯಲಿರುವ ಸುನ್ನಿ ಮಹಾಸಮ್ಮೇಳದಲ್ಲಿ ಕೇರಳದ ಪಾಣಕ್ಕಾಡ್ ಬಶೀರ್ ಸಿ.ಹಾಬ್ ತಂಙಳ್ ಆಶೀರ್ವಚನ ನೀಡುವರು. ಜಿಲ್ಲಾ ಖಾಝಿ ತ್ವಾಖಹದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಸಮಸ್ತದ ಕೇಂದ್ರ ಸಮಿತಿ ಕಾರ್ಯದರ್ಶಿ ಕೋಟುಮಲ ಬಾಪು ಮುಸ್ಲಿಯಾರ್ ಉದ್ಘಾಟಿಸುವರು. ಕುರ್ಆನ್ ವಿದ್ವಾಂಸ ರಹತ್ತುಲ್ಲಾಹ್ ಖಾಸಿಮಿ ಮುತ್ತೇಡಂ ಸಮಾರೋಪ ಭಾಷಣ ಮಾಡುವರು ಎಂದು ಅವರು ಹೇಳಿದರು.
ಸುನ್ನಿ ಮಹಾ ಸಮ್ಮೇಳನಕ್ಕೆ ಮೊದಲು ಕೂಟೇಲು ದರ್ಗಾ ಶರೀಫ್ನಿಂದ ಸಮಾರಂಭ ವೇದಿಕೆಯ ವರೆಗೆ ರ್ಯಾಲಿ ನಡೆಯಲಿದೆ. ಅಧ್ಯಯನ ಶಿಬಿರದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಉಪ್ಪಿನಂಗಡಿ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಯೂಸುಫ್ ಫೈಝಿ, ಕಾರ್ಯದರ್ಶಿ ಇಕ್ಬಾಲ್ ದಾರಿಮಿ, ಉಪ್ಪಿನಂಗಡಿ ಮದ್ರಸ ಮೆನೇಜ್ಮೆಂಟ್ ಅಸೋಶಿಯೇಷನ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೆಜಾಲು, ಕಾರ್ಯದರ್ಶಿ ಯೂಸುಫ್ ಪೆದಮಲೆ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪಂಜ: ಶತಮಾನೋತ್ಸವ ಸಮಿತಿ ರಚನೆ
ಪಂಜ(ಬೆಳ್ಳಾರೆ): ಪಂಜ ವ್ಯವಸಾಯಿಕ ಸಂಘದ ಶತಮಾನೋತ್ಸವ ಸಮಿತಿಯನ್ನು ಇತ್ತೀಚೆಗೆ ಪಂಜದಲ್ಲಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಕೇನ್ಯ ರವೀಂದ್ರನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.
ಬಿ.ಎಂ.ಆನಂದಗೌಡ ಕಂಬಳ, ವಾಸುದೇವ ಪಳಂಗಾಯ, ಶ್ರೀಕೃಷ್ಣ ಭಟ್ ಪಟೋಳಿ, ತಮ್ಮಯ್ಯ ಗೌಡ ಗೆಜ್ಜೆ ಅವರನ್ನು ಉಪಾಧ್ಯಕ್ಷರನ್ನಾಗಿ, ಸತ್ಯನಾರಾಯಣ ಭಟ್ ಕಾಯಂಬಾಡಿ ಅವರನ್ನು ಕೋಶಧ್ಯಕ್ಷರನ್ನಾಗಿ, ಲೋಕೇಶ್ ಬರಮೇಲು ಅವರನ್ನು ಜತೆ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ಎಂ.ಎನ್ ರಾಜೇಂದ್ರಕುಮಾರ್ ಅವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಚಿನ್ನಪ್ಪ ಸಂಕಡ್ಕ, ಸವಿತಾ ಮುಡೂರು, ದಾಸಪ್ಪಗೌಡ, ಪಾಲೋಳಿ ಚಿನ್ನಪ್ಪ ಮಾಸ್ತರ್, ಸಿ.ಎಂ ರಫೀಕ್, ಶೀಲಾವತಿ ತೋಟ, ಕುಶಾಲಪ್ಪಗೌಡ ದೊಡ್ಡಮನೆ, ಗಂಗಾಧರ ನಾಯ್ಕ ಪುಂಡುಕಾಯರ, ಕಾರ್ಯಪ್ಪಗೌಡ ಚಿದ್ಗಲ್, ರತ್ನಾಕರಗೌಡ ಕಕ್ಯಾನ, ಗಂಗಾಧರ ಗೌಡ ಗುಂಡಡ್ಕ, ಗಂಗಾಧರ ಶಾಸ್ತ್ರಿ ಪುತ್ಯ, ವಿಜಯಕುಮಾರ್ ಬಿ.ಕೆ ಬೇರ್ಯ, ಸೂರಪ್ಪಗೌಡ ಚಿದ್ಗಲ್ ಶೇಯಾಂಸ್ ಕುಮಾರ್, ಕುದ್ವ ಸೀತರಾಮ ಮಾಸ್ತರ್, ಚಂದ್ರಾವತಿ ಚಿದ್ಗಲ್, ನಾರಾಯಣ ನಾಯ್ಕ ಬಾಳೆಗುಳಿ, ರಾಮಕೃಷ್ಣ ಅಗಳ್ತ ರಮಾನಂದ ಎಣ್ಣೆಮಜಲು, ಪುರುಶೋತ್ತಮ ಆಲ್ಕಬೆ, ಕಟ್ಟ ಲಿಂಗಪ್ಪ ಮಾಸ್ತರ್, ಪಂಡಿ ಭಾಸ್ಕರ ಗೌಡ, ಸೂರಪ್ಪ ಗೌಡ ಪಂಡಿ, ಜಗನ್ನಾಥ ಪಲ್ಲತ್ತಡ್ಕ, ತಿಮ್ಮಪ್ಪಗೌಡ ಪಲ್ಲತ್ತಡ್ಕ, ಕುಸೂಮವತಿ ಬುಡೆಂಗಿ, ಮಮತಾ ಎಸ್.ಶೆಟ್ಟಿ, ಕೊರಗಪ್ಪ ನಾಯ್ಕ ರಾಧಕೃಷ್ಣ ಕಾರ್ಜ, ಸಂತೋಷ್ ಕುಮಾರ್ ಗೆಜ್ಜೆ, ಭಾಸ್ಕರ ರೈ ಹೊಸಮನೆ, ನಾರಾಯಣ ನಾಯ್ಕ, ಲಕ್ಷ್ಮಣಗೌಡ ಬೊಳ್ಳಾಜೆ, ಪಿ.ಎಸ್. ರಾಜೇಶ್ ಕಂಬಳ ಚಂದ್ರ ಅವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು.
ಪಂಜ ವ್ಯವಸಾಯಿಕ ಬ್ಯಾಂಕ್ ಅಧ್ಯಕ್ಷ ಕೆ.ಜಯಕುಮಾರ ಹೆಗ್ಡೆ, ಉಪಾಧ್ಯಕ್ಷ ಪುಟ್ಟಣ್ಣಗೌಡ ಕುಳ ಹಾಗೂ ಮುಖ್ಯ ಕಾರ್ಯನಿರ್ವಾಹಣಧಿಕಾರಿ ನೇಮಿರಾಜ ಪಲ್ಲೋಡಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.