ಸೋಮವಾರ, ಅಕ್ಟೋಬರ್ 14, 2019
22 °C

ಉಪ್ಪು ನೀರಿಗೆ ಕಮರಿದ ಶೇಂಗಾ ಬೆಳೆ

Published:
Updated:

ಹೊನ್ನಾವರ: ಬಡಗಣಿ ನದಿಯ ಉಪ್ಪು ನೀರು ನುಗ್ಗಿದ ಪರಿಣಾಮವಾಗಿ ಹಳದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಿಕೊಟ್ಟಿಗೆ, ಕಟ್ರಸಿಟ್ಟೆ, ಸಂಕ್ರುಕೇರಿ, ಬಡಗಣಿ, ಮಣ್ಣಗದ್ದೆ ಮಜರೆಗಳ ಸುಮಾರು 300 ಎಕ್ರೆ ಪ್ರದೇಶದಲ್ಲಿ ಬೆಳೆದ ಶೇಂಗಾ ಬೆಳೆಗೆ ಹಾನಿ ಸಂಭವಿಸಿದೆ.ಗದ್ದೆಯ ಪಕ್ಕದ ಗಜನಿ ಭೂಮಿ ಯಲ್ಲಿ ಸಿಗಡಿ ಕೃಷಿಗಾಗಿ ನಿರ್ಮಿಸಲಾಗಿ ರುವ ನೀರಿನ ಕಾಲುವೆ ಸಮರ್ಪಕವಾ ಗಿಲ್ಲದ ಕಾರಣ ಶೇಂಗಾ ಗದ್ದೆಗಳಿಗೆ ಉಪ್ಪು ನೀರು ನುಗ್ಗುವಂತಾಗಿದೆ ಯೆಂದು ಇಲ್ಲಿಯ ಕೃಷಿಕರು ಆಪಾದಿಸಿದ್ದಾರೆ.ಉಪ್ಪು ನೀರಿನಿಂದ ತಮ್ಮ ಬೆಳೆ ಹಾನಿಗೊಳಗಾಗಿ ತಾವು ನಷ್ಠ ಅನುಭ ವಿಸುವಂತಾಗಿದ್ದು ಸಂಬಂಧಿಸಿದವರು ತಮ್ಮ ನೆರವಿಗೆ ಬರಬೇಕೆಂದು ಈ ಭಾಗದ ರೈತರಾದ ಶಂಕರ ಗೌಡ,ಎಸ್.ಎಂ.ಇಸ್ಮಾಯಿಲ್,ತುಳುಸು ಗೌಡ, ಗಣಪು ಗೌಡ, ಶಿವು ಗೌಡ, ನಾರಾಯಣ ಗೌಡ, ಮಾದೇವ ಗೌಡ, ತಿಮ್ಮಪ್ಪ ಗೌಡ, ಶಂಕರ ಗೌಡ, ಜಟ್ಟು ಗೌಡ, ಈಶ್ವರ ಗೌಡ ಆಗ್ರಹಿಸಿದ್ದಾರೆ.ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಹಳದೀಪುರ ಗ್ರಾ.ಪಂ. ಅಧ್ಯಕ್ಷ ದಾಮೋದರ ನಾಯ್ಕ ಸದಸ್ಯರಾದ ವಿನಾಯಕ ಶೇಟ್, ಕೆ.ಎಚ್.ಗೌಡ,ಜಯರಾಮ ಗೌಡ, ಉಪ್ಪು ನೀರು ಗದ್ದೆಗಳಿಗೆ ನುಗ್ಗದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Post Comments (+)