ಉ.ಪ್ರ: ಮೊದಲ 6 ಗಂಟೆ ಶೇ 39 ರಷ್ಟು ಮತದಾನ

7

ಉ.ಪ್ರ: ಮೊದಲ 6 ಗಂಟೆ ಶೇ 39 ರಷ್ಟು ಮತದಾನ

Published:
Updated:

ಲಖನೌ (ಐಎಎನ್ಎಸ್): ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯ ಏಳನೇ ಹಂತದ ಐದನೇ ಸುತ್ತಿನ ಮತದಾನವು ಗುರುವಾರ ಬೆಳಿಗ್ಗೆ ಚುರುಕಿನಿಂದ ಆರಂಭವಾಗಿದ್ದು, ಮೊದಲ ಆರು ಗಂಟೆಗಳಲ್ಲಿ ಶೇ 39ರಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ.

ಗುರುವಾರದ ಮತದಾನದಲ್ಲಿ 49 ವಿಧಾನ ಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು. ಇದುವರೆಗೆ ಯಾವುದೇ ಬಗೆಯ ಅಹಿತಕರ ಘಟನೆಗಳು ವರದಿಯಾಗಿಲ್ಲ.

~ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭವಾಯಿತು. ಮಧ್ಯಾಹ್ನ 1 ಗಂಟೆಯವರೆಗೆ ಶೇ 39ರಷ್ಟು ಮತದಾನವಾಗಿದ್ದು, ಇಷ್ಟು ಅವಧಿಯಲ್ಲಿನ ಈ ಪ್ರಮಾಣ, ಈ ಬಾರಿ ಇದುವರೆಗೆ ನಡೆದ ಮತದಾನಗಳಲ್ಲಿ ಇದು ಅತೀ ಹೆಚ್ಚಿನ ಪ್ರಮಾಣದ ಮತದಾನದ ದಾಖಲೆ ಎಂದು ಮುಖ್ಯ ಚುನಾವಣಾಧಿಕಾರಿ ಉಮೇಶ್ ಸಿನ್ಹ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಒಟ್ಟು ಮತದಾರರ ಸಂಖ್ಯೆ 15,654,936 ಇದ್ದು, ಅದರಲ್ಲಿ 8,653,345 ಪುರುಷರಿದ್ದರೆ, ಮಹಿಳೆಯರ ಸಂಖ್ಯೆ 7,001,279. ಉಳಿದವರ ಸಂಖ್ಯೆ 312. ಈ ಮತದಾರರು ಏಳನೇ ಹಂತದ ಐದನೇ ಸುತ್ತಿನ ಮತದಾನದಲ್ಲಿ ಮತಚಲಾಯಿಸುತ್ತಿದ್ದು, 87 ಮಂದಿ ಮಹಿಳೆಯರೂ ಸೇರಿದಂತೆ ಕಣದಲ್ಲಿರುವ 829 ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry