ಶನಿವಾರ, ಏಪ್ರಿಲ್ 17, 2021
23 °C

ಉಪ ಕಸುಬುಗಳತ್ತ ಗಮನಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರಹಳ್ಳಿ(ಕಡೂರು): ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವ ತಾಲ್ಲೂಕಿನ ರೈತರಿಗೆ ಜೀವನ ಬೇಸತ್ತು ತೆಂಗು, ಅಡಿಕೆ ತೋಟ ಉಳಿಸಿಕೊಳ್ಳುವುದು ದುಸ್ತರವಾಗಿದೆ. ಇಂತಹ ಸಮಯದಲ್ಲಿ ಕುರಿ ಸಾಕಾಣಿಕೆ, ಹೈನುಗಾರಿಕೆಯಂತಹ ಉಪ ಕಸುಬುಗಳನ್ನು ಅವಲಂಬಿಸಿ ಬರಗಾಲದಲ್ಲಿ ಬದುಕುವುದನ್ನು ಕಲಿಯಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು ರೈತರಿಗೆ ಕರೆ ನೀಡಿದರು.    ತಾಲ್ಲೂಕಿನ ಕಡೂರಹಳ್ಳಿ ಗ್ರಾಮದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಮುದಾಯ ಭವನ, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ರೈತರು ಸಂಕಷ್ಟದಲ್ಲಿದ್ದು, ಸರ್ಕಾರ 25 ಸಾವಿರ ರೂಗಳನ್ನು ಮಾತ್ರ ಸಾಲ ಮನ್ನಾ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಸಂಪೂರ್ಣ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ರೈತರಿಗೆ ನೀಡುತ್ತಿರುವ ಮೇವಿನಕಿಟ್‌ಗಳಿಂದ ಎಷ್ಟು ಜನ ಮೇವು ಬೆಳೆಯುತ್ತಿದ್ದಾರೆ ? ನೀಡಿರುವ ಸಂಖ್ಯೆಗೆ ಹೋಲಿಸಿದರೆ 25 ಭಾಗ ಮಾತ್ರ ಕಾಣಿಸುತ್ತದೆ. ಉಳಿದ 75 ಭಾಗದ ಕಿಟ್‌ಗಳು ಎಲ್ಲಿ ಎಂಬ ಲೆಕ್ಕ ಇಲ್ಲ ಎಂದು ತಾಲ್ಲೂಕು ಆಡಳಿತವನ್ನು ಪ್ರಶ್ನಿಸಿದರು. ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಸಿ.ನಂಜಪ್ಪ ಮಾತ ನಾಡಿ,   ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ಅನುಷ್ಠಾನಗೊಳಿಸಿ ಬಿಜೆಪಿ ಸರ್ಕಾರ ತನ್ನ ಕೆಲಸಗಳೆಂದು ಪ್ರಚಾರ ಪಡೆಯುತ್ತಿದೆ ಎಂದರು. ಜಿ.ಪಂ.ಸದಸ್ಯೆ ಮಾಲಿನಿಬಾಯಿ ರಾಜನಾಯ್ಕ ಮಾತನಾಡಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ದಿಂದ 5 ಲಕ್ಷ ರೂಪಾಯಿಗಳು ಸಮುದಾಯ ಭವನ ನಿರ್ಮಾಣಕ್ಕೆ ನೀಡಿದ್ದು. ಜಿಲ್ಲಾ ಪಂಚಾಯಿತಿ ವತಿಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.ತಂಗಲಿ ಕ್ಷೇತ್ರದ ತಾ.ಪಂ. ಸದಸ್ಯ ಆರ್.ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪ.ಸದಸ್ಯೆ ಪದ್ಮಾ ಚಂದ್ರಪ್ಪ, ಕಾಂಗ್ರೆಸ್ ಯುವ ಮುಖಂಡ ಶರತ್ ಕೃಷ್ಣಮೂರ್ತಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಆರ್.ಜಗದೀಶ್,ಕಾರ್ಯದರ್ಶಿ ಕೆ.ಜೆ.ರಮೇಶ್, ಸದಸ್ಯರಾದ ಶೇಖರಪ್ಪ, ಲೋಕೇಶ್, ಜಯಮ್ಮ, ಮಂಜಪ್ಪ, ತಿಮ್ಮಯ್ಯ, ಕೆ.ಜಿ.ರಮೇಶ್, ಜಗದೀಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.