ಸೋಮವಾರ, ನವೆಂಬರ್ 18, 2019
23 °C

ಉಪ ನಾಯಕತ್ವಕ್ಕೆ ಶೇನ್ ವ್ಯಾಟ್ಸನ್ ಗುಡ್ ಬೈ

Published:
Updated:

ಮೆಲ್ಬೋರ್ನ್ (ಐಎಎನ್‌ಎಸ್) : ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನದ ಬಳಿಕ ಹೆಚ್ಚು ರನ್ ಗಳಿಕೆ  ಮತ್ತು ವಿಕೆಟ್ ಪಡೆಯುವುದರತ್ತ ಗಮನ ಹರಿಸುವ ಕಾರಣವೊಡ್ಡಿ ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವ್ಯಾಟ್ಸನ್ ಅವರು ಉಪ ನಾಯಕ ಸ್ಥಾನ ತ್ಯಜಿಸಿದ್ದಾರೆ.

ಸದ್ಯ ಐಪಿಎಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಪರವಾಗಿ ಆಡುತ್ತಿರುವ ವ್ಯಾಟ್ಸನ್ ಅವರು ತಾವು ಎಲ್ಲಾ ವಿಧವಾದ ಕ್ರಿಕೆಟ್ ಪಂದ್ಯಗಳಿಂದಲೂ ಉಪ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಶುಕ್ರವಾರ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ)ಕ್ಕೆ ತಿಳಿಸಿದ್ದರು.

`ಉಪ ನಾಯಕ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಅಷ್ಟು ಸುಲಭವಲ್ಲ. ಆದರೆ ಭಾರತ ವಿರುದ್ಧದ ಟೆಸ್ಟ್ ಸರಣಿ ಮುಗಿದಾಗಿನಿಂದಲೂ ನಾನು ಆಗ ಬಗ್ಗೆ ಯೋಚಿಸುತ್ತಿದ್ದೆ' ಎಂದು ಅವರು ಹೇಳಿದರು.

`ಆಸ್ಟ್ರೇಲಿಯಾ ತಂಡಕ್ಕೆ ನಾನು ಉತ್ತಮ ಟೆಸ್ಟ್ ಆಟಗಾರನಾಗಲು ಬಯಸುತ್ತೇನೆ. ಉಪ ನಾಯಕ ಸ್ಥಾನದಿಂದ ಕೆಳಗಿಳಿದರೆ ಹೆಚ್ಚು ರನ್ ಗಳಿಸಲು ಮತ್ತು ಹೆಚ್ಚು ವಿಕೆಟ್ ಪಡೆಯುವತ್ತ ಗಮನಹರಿಸುವುದಷ್ಟೇ ಅಲ್ಲದೆ ತಂಡದ ಯಶಸ್ಸಿಗೆ ಪೂರಕವಾಗುವಂತೆ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ' ಎಂದರು.

ಪ್ರತಿಕ್ರಿಯಿಸಿ (+)