ಉಪ ಲೋಕಾಯುಕ್ತರ ಭೇಟಿ

7

ಉಪ ಲೋಕಾಯುಕ್ತರ ಭೇಟಿ

Published:
Updated:

ರಾಯಬಾಗ: ತಾಲ್ಲೂಕಿನ ಹಂದಿಗುಂದ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಉಪ ಲೋಕಾಯುಕ್ತ ಎಸ್‌.ವಿ. ಮಜ್ಜಗಿ ಗ್ರಾಮಸ್ಥರ ದೂರಿನನ್ವಯ ಇತ್ತೀಚಿಗೆ ಭೇಟಿ ನೀಡಿ ಪರಿಶೀಲಿಸಿದರು.ಗ್ರಾಮದ ಹೊಸೂರ ರಸ್ತೆ ಕಾಮ­ಗಾರಿ, ರುದ್ರಭೂಮಿ, ಕಟ್ಟಡ, ಸಂಚಾರಿ ವೈದ್ಯಕೀಯ ಆಸ್ಪತ್ರೆ, ಗ್ರಾಮ ಪಂಚಾ­ಯ್ತಿಯಿಂದ ನಿರ್ಮಿಸಲಾದ ಚರಂಡಿ ಕಾಮ­ಗಾರಿಗಳನ್ನು ವೀಕ್ಷಿಸಿದರು. ಗ್ರಾಮದ ಮನೆಗಳ ಮುಂದೆ ನಿಂತ ಕೊಳಚೆ ನೀರು ಗಬ್ಬು ನಾರು­ತ್ತಿರು­ವು­ದನ್ನು ಗಮನಸಿದ ಅವರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ದೇವರವರ ಹಾಗೂ ಪಿ.ಡಿ.ಒ ಬಿ.ವಿ. ಮಸಾಲಜಿ ಅವರನ್ನು ತರಾಟೆಗೆ ತೆಗೆದು­ಕೊಂಡರು. ಕೂಡಲೇ  ಫಾಗಿಂಗ್‌  ಮಾಡು­ವಂತೆ ಸೂಚಿಸಿದರು.ಜಿಲ್ಲಾ ಲೋಕಾಯುಕ್ತ ಜಿ.ಆರ್‌. ಪಾಟೀಲ, ಬಿ.ಎಸ್‌. ಪಾಟೀಲ, ತಾ.ಪಂ. ಅಧಿಕಾರಿ ವೀರಣ್ಣ ವಾಲಿ, ಗೌಡಪ್ಪ ಪಾಟೀಲ, ಹನಮಂತ ನಾವಿ, ಸದಾಶಿವ ಬುರ್ಜಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry