ಶುಕ್ರವಾರ, ನವೆಂಬರ್ 22, 2019
20 °C

ಉಮಾಪತಿ ಅರ್ಜಿ: ವಿಚಾರಣೆ ಮುಂದಕ್ಕೆ

Published:
Updated:

ಬೆಂಗಳೂರು: ಲಾಲ್ ರೋಕುಮ ಪಚಾವ್ ಅವರನ್ನು ರಾಜ್ಯದ ಪೊಲೀಸ್ ಮಾಹಾನಿರ್ದೇಶಕರನ್ನಾಗಿ (ಡಿಜಿಪಿ) ನೇಮಕ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ ಹಿರಿಯ ಪೊಲೀಸ್ ಅಧಿಕಾರಿ ಡಾ.ಬಿ.ಇ. ಉಮಾಪತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ ಮುಂದೂಡಿದೆ.`ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಹುದ್ದೆ ನಿಭಾಯಿಸಲು ಪಚಾವ್ ಅವರಿಗಿಂತ ಹೆಚ್ಚಿನ ಅರ್ಹತೆ ನನಗಿತ್ತು. ಆದರೆ ಸರ್ಕಾರ ನನ್ನ ಸೇವೆ ಕಡೆಗಣಿಸಿ, ಪಚಾವ್ ಅವರನ್ನು ನೇಮಕ ಮಾಡಿದೆ' ಎಂದು ದೂರಿ ಉಮಾಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ನಡೆಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)