ಬುಧವಾರ, ಜೂನ್ 16, 2021
22 °C

ಉಮಾಶ್ರೀ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಅಂಬೇಡ್ಕರ್‌  ವಿರುದ್ಧ ಅವಹೇಳನಕಾರಿಯಾಗಿ ಮಾತ­ನಾ­ಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ನಗರದ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನ­ದವರೆಗೆ ಶನಿವಾರ ಪ್ರತಿಭಟನಾ ರ್‌್ಯಾಲಿ ನಡೆಸಿದರು.ಈ ವೇಳೆ ಮಾತನಾಡಿದ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎನ್‌. ಮೂರ್ತಿ, ‘ಪ್ರತಿ ವರ್ಷ ಇಲಾಖೆಯಲ್ಲಿ ಅಂಬೇ­ಡ್ಕರ್‌ ಜಯಂತಿ ಆಚರಿಸಲಾಗು­ತ್ತಿತ್ತು.  ಜತೆಗೆ ಪರಿನಿರ್ವಾಣ ದಿನಾ­ಚರಣೆ, ಸಮತಾ ಸಂಭ್ರಮ, ಪ್ರತಿಭಾ ಪುರ­ಸ್ಕಾರ, ಜನೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಸಲಾಗು­ತ್ತಿತ್ತು. ಆದರೆ, ಉಮಾಶ್ರೀ ಅವರು ಸಚಿವರಾದ ನಂತರ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ’ ಎಂದು ಆರೋಪಿಸಿದರು.‘ಅಂಬೇಡ್ಕರ್‌ ಜಯಂತಿ ಆಚರಿಸದಿ­ರು­ವುದನ್ನು ಪ್ರಶ್ನಿಸಲು ಉಮಾಶ್ರೀ ಅವರ ಕಚೇರಿಗೆ ಹೋದಾಗ, ಅಂಬೇ­ಡ್ಕರ್‌ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರು. ಜತೆಗೆ ದಲಿತ ಹಾಗೂ ಕನ್ನಡ ಸಂಘಟನೆಗಳನ್ನು ಕಲೆಕ್ಷನ್‌ ಗಿರಾಕಿಗಳು ಎಂದು ಅಪಮಾ­ನಿಸಿದರು. ಮುಖ್ಯಮಂತ್ರಿಗಳು ಈ ವಿಷ­ಯವನ್ನು ಗಂಭೀರವಾಗಿ ಪರಿಗಣಿಸಿ ಸಚಿವೆ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.