ಉರುಳಿಬಿದ್ದ ಕಾರು; ಇಬ್ಬರ ಸಾವು

7

ಉರುಳಿಬಿದ್ದ ಕಾರು; ಇಬ್ಬರ ಸಾವು

Published:
Updated:

ಸಿರವಾರ (ರಾಯಚೂರು ಜಿಲ್ಲೆ): ವೇಗವಾಗಿ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರಣ ಇಬ್ಬರು ಮೃತಪಟ್ಟ ಘಟನೆ ನೀಲಗಲ್ ಗ್ರಾಮದ ಸಮೀಪ ಭಾನುವಾರ ಬೆಳಿಗ್ಗೆ ನಡೆದಿದೆ.ಹುಲಿಗೆಮ್ಮ (56) ಸ್ಥಳದಲ್ಲಿಯೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಪ್ರಭು (26) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿದೆ.ಕಾರಿನಲ್ಲಿದ್ದವರು  ರಾಯಚೂರು ಸಮೀಪದ ಹೊಸೂರು ಗ್ರಾಮದಿಂದ ದೇವದುರ್ಗಕ್ಕೆ ಶವಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರೆಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry