ಶನಿವಾರ, ಮೇ 15, 2021
25 °C

ಉಲ್ಬಣಿಸಿದ ಚಳಿಜ್ವರ ವೈದ್ಯರಿಲ್ಲದೆ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಚಳಿ ಮಿಶ್ರಿತ ಮಳೆಯಿಂದಾಗಿ ವಾತಾವರಣದಲ್ಲಿ ಬದಲಾವಣೆ ಉಂಟಾಗಿದ್ದು, ಎಲ್ಲೆಡೆ ಚಳಿ ಜ್ವರ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ.ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ವಾತಾವರಣ ತಂಪಾಗಿದ್ದು, ಸಂಜೆಯ ವೇಳೆಗೆ ವಿಪರೀತ ಚಳಿ ಉಂಟಾಗುತ್ತಿದೆ. ಹಗಲು ಹೊತ್ತಿನಲ್ಲಿ ಬಿಸಿಲು ಮಳೆ ಬೀಳುತ್ತಿರುವುದರಿಂದ ವಾತಾವರಣದಲ್ಲಿ ವೈಪರಿತ್ಯ ಉಂಟಾಗಿದ್ದು, ಚಳಿ ಜ್ವರದಂತಹ ರೋಗಗಳು ಕಾಣಿಸಿಕೊಳ್ಳತೊಡಗಿದೆ. ಅದರಲ್ಲೂ ಸಣ್ಣ ವಯಸ್ಸಿನ ಮಕ್ಕಳಲ್ಲಿ ಈ ಪ್ರಕರಣ ಹೆಚ್ಚಾಗಿರುವುದು ಆತಂಕಕಾರಿಯಾಗಿದ್ದು, ಮಕ್ಕಳ ವೈದ್ಯರಿಲ್ಲದ ಸರ್ಕಾರಿ ಆಸ್ಪತ್ರೆಯಿಂದ ಚಿಕಿತ್ಸೆ ಲಭಿಸದೇ ಇರುವುದು ಪೋಷಕರನ್ನು ಕಂಗೆಡಿಸಿದೆ.ಇಲ್ಲಿನ 100 ಹಾಸಿಗೆ ಸೌಲಭ್ಯವುಳ್ಳ ಮಹಾತ್ಮಗಾಂಧಿ ಸ್ಮಾರಕ ಆಸ್ಪತೆಯಲ್ಲಿ ಕೇವಲ ನಾಲ್ಕು ಜನ ವೈದ್ಯರಿದ್ದು, ಅದರಲ್ಲಿ ಮೂವರು ನೇತ್ರ, ಮೂಳೆ ಮತ್ತು ಕೀಲು, ಚರ್ಮ ವೈದ್ಯರಾಗಿದ್ದು, ಸಾಮಾನ್ಯ ರೋಗಗಳಿಗೆ ವಿಕಿತ್ಸೆ ನೀಡಲು ವೈದ್ಯರಿಲ್ಲದಂತಾಗಿದೆ. ಇದಲ್ಲದೇ ಮಕ್ಕಳ ವೈದ್ಯರಿಲ್ಲದ ಕಾರಣ ಯಾವುದೇ ಹೊತ್ತಿನಲ್ಲಿ ಮಕ್ಕಳಿಗೆ ಖಾಯಿಲೆ ಕಾಣಿಸಿಕೊಂಡರೂ ಜಿಲ್ಲಾ ಕೇಂದ್ರ ಅಥವಾ ಪಕ್ಕದ ಹಾಸನ ಮುಂತಾದ ಸ್ಥಳಗಳಿಗೆ ಕರೆದೊಯ್ದು ಚಿಕಿತ್ಸೆ ಪಡೆಯ ಬೇಕಾದಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೇ ಮರಣಹೊಂದಿದ ಅನೇಕ ಪ್ರಕರಣ ತಾಲ್ಲೂಕಿನಲ್ಲಿ ಸಂಭವಿಸಿದ್ದರೂ ವೈದ್ಯರನ್ನು ನೇಮಕಗೊಳಿಸಲು ವಿಫಲವಾಗಿರುವ ಜನಪ್ರತಿನಿಧಿಗಳ ಆಡಳಿತ ಕ್ರಮವನ್ನು ಪ್ರಶ್ನಿಸುವಂತಾಗಿದೆ.ಈಗ ರಾಜ್ಯದಲ್ಲಿ ಡೆಂಗೆ ರೋಗ ಪ್ರಕರಣ ತಲೆಯೆತ್ತಿದ್ದು, ಅಂತಹ ಪ್ರಕರಣಗಳನ್ನು ಪತ್ತೆಹಚ್ಚಲೂ ವೈದ್ಯರಿಲ್ಲದಂತಹ ಪರಿಸ್ಥಿತಿ ಎದುರಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.