ಉಲ್ಲಾಸದ ಜೀವನಕ್ಕೆ ಕ್ರೀಡೆ ಅವಶ್ಯ

ಶುಕ್ರವಾರ, ಮೇ 24, 2019
30 °C

ಉಲ್ಲಾಸದ ಜೀವನಕ್ಕೆ ಕ್ರೀಡೆ ಅವಶ್ಯ

Published:
Updated:

ಹಾವೇರಿ: `ಕ್ರೀಡೆಗಳು ಜೀವನವನ್ನು ಉಲ್ಲಾಸದಿಂದ ಇಡುವುದರ ಜೊತೆಗೆ ಆರೋಗ್ಯ ವೃದ್ಧಿಗೆ ಸಹಾಯ ಮಾಡು ತ್ತೇವೆ~ ಎಂದು ಜಿ.ಪಂ.ಅಧ್ಯಕ್ಷ ಮಂಜು ನಾಥ ಓಲೇಕಾರ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕ್ರೀಡೆಯನ್ನು ಕೇವಲ ಸೋಲು, ಗೆಲುವಿಗೆ ಮಾತ್ರ ಸೀಮಿತಗೊಳಿಸದೇ ಅದೊಂದು ಪರಸ್ಪರ ಸ್ನೇಹ ಬೆಸೆಯುವ ಕೊಂಡಿ ಎಂಬುದನ್ನು ಪ್ರತಿಯೊಬ್ಬ ಕ್ರೀಡಾಪಟು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದ ಅವರು, ಎಲ್ಲ ಕ್ರೀಡಾಪಟುಗಳು ಜಿಲ್ಲೆಯವರೇ ಆಗಿದ್ದ ರಿಂದ ಪ್ರತಿಯೊಂದು ಕ್ರೀಡೆಯಲ್ಲಿ ಕ್ರೀಡಾ ಪಟುಗಳು ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಬೇಕೆಂದು ಹೇಳಿದರು.ನಿರ್ಣಾಯಕರು ಕೂಡಾ ಪಕ್ಷಪಾತಿ ಧೋರಣೆಯನ್ನು ಅನುಸರಿಸದೇ ಉತ್ತಮ ಕ್ರೀಡಾಪಟುಗಳನ್ನು ಬೆಂಬ ಲಿಸುವ ಮೂಲಕ ಅವರ ಉತ್ಸಾಹ ಹಾಗೂ ಪರಿಶ್ರಮವನ್ನು ಬೆಂಬಲಿಸ ಬೇಕು. ಆಗ ಮಾತ್ರ ಉತ್ತಮ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟ ದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಜಿ.ಪಂ.ಸದಸ್ಯೆ ಶೋಭಾ ನಿಸ್ಸೀಮ ಗೌಡರ ಮಾತನಾಡಿ, ಪಠ್ಯದ ಜತೆಗೆ ಕ್ರೀಡೆಗೂ ಸಮಯ ನಿಗದಿ ಮಾಡಿ ಕೊಂಡು ಪರಿಶ್ರಮಪಟ್ಟರೆ ಉತ್ತಮ ಕ್ರೀಡಾಪಟು ಆಗುವುದರಲ್ಲಿ ಸಂಶಯ ವಿಲ್ಲ. ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ.

 

ಅದನ್ನು ಸದುಪಯೋಗಪಡಿಸಿಕೊಂಡು ಕ್ರೀಡೆ ಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂದು ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಗದಿಗೆವ್ವ ಬಸನಗೌಡರ ಅವರು ಕ್ರೀಡಾ ಜ್ಯೋತಿಯನ್ನು ಬೆಳಗಿದರು.ನಗರಸಭೆ ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್ .ಬಿ.ಕೊಡ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮಶೆಟ್ಟಿ, ದೈಹಿಕ ಶಿಕ್ಷಣಾಧಿಕಾರಿ ಇಚ್ಚಂಗಿ, ಡಯಟ್ ಪ್ರಾಚಾರ್ಯ ಎಂ. ಡಿ.ಬಳ್ಳಾರಿ ಅಲ್ಲದೇ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry