ಉಳವಿ ಜ್ಞಾನನಿಧಿ ಚೆನ್ನಬಸವೇಶ್ವರ ಜಾತ್ರೆಗೆ ಭಕ್ತರ ಲಗ್ಗೆ

7

ಉಳವಿ ಜ್ಞಾನನಿಧಿ ಚೆನ್ನಬಸವೇಶ್ವರ ಜಾತ್ರೆಗೆ ಭಕ್ತರ ಲಗ್ಗೆ

Published:
Updated:

ಜೋಯಿಡಾ: ತಾಲ್ಲೂಕಿನ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸ ವವು ಆರಂಭವಾಗಿದ್ದು ಸಾವಿರಾರು ಭಕ್ತರು ಚಕ್ಕಡಿ, ಟ್ರ್ಯಾಕ್ಟರ್ ಮತ್ತಿತರ ವಾಹನಗಳಲ್ಲಿ ಕುಟುಂಬ ಸಮೇತರಾಗಿ ಬರುತ್ತಿದ್ದಾರೆ. ಬೆಳಗಾವಿ, ಬೈಲ ಹೊಂಗಲ, ಹುಬ್ಬಳ್ಳಿ, ಧಾರವಾಡ, ಕಿತ್ತೂರ ಹಾಗೂ ಸುತ್ತಮುತ್ತಲಿನ ಭಕ್ತರು ತಂಡೋಪತಂಡವಾಗಿ ಆಗಮಿ ಸುತ್ತಿರುವ ದೃಶ್ಯ ಸಾಮಾನ್ಯ ವಾಗಿದೆ.ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ವ್ಯವಸ್ಥೆಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡಿದೆ. ಕುಡಿಯುವ ನೀರಿನ ವ್ಯವಸ್ಥೆ, ವಾಸ ಮಾಡಲು ತಟ್ಟಿಕೋಲಿ (ಸಣ್ಣ ಗುಡಿಸಲು)ಗಳನ್ನು ನಿರ್ಮಿಸಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನೂ ತೆರೆಯಲಾಗಿದೆ. ಪೂಜೆ, ಅಭಿಷೇಕ, ಆರತಿ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ಪ್ರತಿನಿತ್ಯ ನಡೆಯು ತ್ತಿವೆ. ದೀಡ್ ನಮಸ್ಕಾರ, ಉರುಳು ಸೇವೆ, ತುಲಾಭಾರ ಸೇವೆಗಳು ದೇವಸ್ಥಾನದಲ್ಲಿ ನಡೆಯುತ್ತಿವೆ.ವಿವಿಧ ಭಕ್ತಮಂಡಳಿಗಳಿಂದ ಅಹೋರಾತ್ರಿ ಭಜನೆ, ಕಿರ್ತನೆ ನಡೆಯುತ್ತಿದೆ. ಕಳೆದ 57 ವರ್ಷಗಳಿಂದ ಇಲ್ಲಿಗೆ ಆಗಮಿಸುತ್ತಿರುವ ಧಾರವಾಡ ತಾಲ್ಲೂಕಿನ ಮನಸೂರ ಗ್ರಾಮದ ಕಲ್ಲನಗೌಡ ಬಾಳನಗೌಡ ಪಾಟೀಲ ನೇತೃತ್ವದ ಕರಡಿಮಜಲು ತಂಡ 15 ದಿನಗಳವರೆಗೆ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದೆ. ಉಳವಿ ಜಾತ್ರೆಗೆ ಬಂದವರು ಬಳೆ ಹಾಗೂ ಬೆತ್ತದ ಬುಟ್ಟಿಗಳನ್ನು ಒಯ್ಯುವ ಸಂಪ್ರದಾಯ ರೂಢಿಯಲ್ಲಿದ್ದು ಬಳೆ, ಬುಟ್ಟಿ ಖರೀದಿ ಜೋರಾಗಿದೆ

ಕಾಗದ ಕಾರ್ಖಾನೆಯಿಂದ ಮಾಲಿನ್ಯ: ದತ್ತಾಕಾರವಾರ: ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಕಾರ್ಖಾನೆಯಿಂದ ಹೊರಬರುವ ವಿಷಕಾರಿ ನೀರು ಶುದ್ಧೀಕರಿಸದೇ ಕಾಳಿ ನದಿಗೆ ಬಿಡುವುದರಿಂದ ನೀರು ವಿಷಕಾರಿ ಯಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ  ಎನ್.ದತ್ತಾ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು,  ಕಾರ್ಖಾ ನೆಯಿಂದ ಹೊರಬರುವ ವಿಷಕಾರಿ ನೀರು ಮೊಸಳೆ ಪಾರ್ಕ್‌ಗೆ ಹರಿದು ಬರುವುದರಿಂದ ಮೊಸಳೆಗಳು ಸಾವನ್ನ ಪ್ಪಿರಬಹುದು ಎನ್ನುವ ವದಂತಿ ಹರ ಡಿದೆ. ಈ ಕುರಿತು ತನಿಖೆ ನಡೆಸಬೇಕು ಎಂದರು.ಕಾರ್ಖಾನೆಯ 5 ಮತ್ತು 6ನೇ ಯಂತ್ರೋಪಕರಣ ಕಟ್ಟಡ ನಿರ್ಮಾಣ ವಾಗಿ ಎರಡು ವರ್ಷ ಕಳೆದಿದೆ. ಕಾನೂನು ಬಾಹಿರವಾಗಿ ಈ ಕಟ್ಟಡ ನಿರ್ಮಿಸ ಲಾಗಿದೆ. ನಗರಸಭೆ ಹಾಗೂ ನಗರಾ ಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕ್ರಮಕೈಗೊಳ್ಳದೆ ಸಮ್ಮನೆ ಕುಳಿತಿರುವುದು ಆಶ್ಚರ್ಯ ತಂದಿದೆ. ಹೊಸ ಘಟಕ ಸ್ಥಾಪನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಹೇಗೆ ಪರವಾನಗಿ ನೀಡಿತು ಎಂದು ಅವರು ಪ್ರಶ್ನಿಸಿದರು.ಕಾರ್ಮಿಕರಿಗೆ ಬೆಂಬಲ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 11 ದಿನಗಳಿಂದ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ವೇದಿಕೆ ಸಂಪೂರ್ಣ ಬೆಂಬಲ  ಇದೆ ಎಂದರು.ಕಾರ್ಮಿಕರ ಮೂಲಭೂತ ಬೇಡಿಕೆ ಗಳಿಗೆ ಸ್ಪಂದಿಸದೆ ಕಾರ್ಖಾನೆಯ ಅಧಿಕಾರಿಗಳು ದರ್ಪ ತೋರಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಕಾಯಂ ಮಾಡಿ ಕೊಳ್ಳದೇ ಅವರನ್ನು ವಂಚಿಸಿದ್ದಾರೆ ಎಂದು ಅವರ ದೂರಿದರು.ಕರವೇ ಪದಾಧಿಕಾರಿ ದೀಪಕ ಕುಡಾಳಕರ್, ಮಂಗೇಶ ನಾಯ್ಕ, ಸುಜಿತ ಮಾಳ್ಸೇಕರ್, ವಿನಾಯಕ ಹರಿಕಂತ್ರ, ವಿಜಯ ಇಡೂರ‌್ಕರ್, ಸುನೀಲ್ ನಾಯ್ಕ, ರವಿರಾಜ ಮುಂತಾದವರು ಪತ್ರಿಕಾಗೋಷ್ಠಿ ಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry