ಉಳಿತಾಯ ಬಜೆಟ್ ಮಂಡನೆ

7

ಉಳಿತಾಯ ಬಜೆಟ್ ಮಂಡನೆ

Published:
Updated:

ಹಾವೇರಿ: ಇಲ್ಲಿಯ ನಗರಸಭೆ 2011-12ನೇ ಸಾಲಿಗಾಗಿ 6.48 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್ ಮಂಡನೆ ಮಾಡಿದ್ದು, ಯಾವುದೇ ಚರ್ಚೆ ಇಲ್ಲದೇ ಬಜೆಟ್‌ಗೆ ನಗರಸಭೆ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿತು.‘ಪ್ರಸಕ್ತ ವರ್ಷ ನಗರಸಭೆಗೆ ಒಟ್ಟು 28.56 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, ಅದರಲ್ಲಿ 28.50 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ 6.48 ಲಕ್ಷ ಉಳಿತಾಯದ ಬಜೆಟ್ ಇದಾಗಲಿದೆ’ ಎಂದು ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ ತಿಳಿಸಿದರು.ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಜೆಟ್ ಪ್ರತಿ ಓದಿದ ಅವರು, ನಗರದ ಜನತೆಗೆ ಯಾವುದೇ ಹೊಸ ತೆರಿಗೆ ಹಾಕದೇ ಬರುವ ಆದಾಯದಲ್ಲಿಯೇ ಅಭಿವೃದ್ಧಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.ನಗರಸಭೆಗೆ ಆಸ್ತಿ ಕರದಿಂದ 1.12 ಕೋಟಿ ರೂ., ನೀರಿನ ಕರದಿಂದ 40.25ಲಕ್ಷ ರೂ., ಮಳಿಗೆ ಬಾಡಿಗೆಯಿಂದ 45 ಲಕ್ಷ ರೂ., ಅಭಿವೃದ್ಧಿ ಕರದಿಂದ 20 ಲಕ್ಷ ರೂ, ಮೀಟರ್ ಠೇವಣಿಯಿಂದ 10 ಲಕ್ಷ ರೂ., ಸಂತೆ ಶುಲ್ಕದಿಂದ 80 ಸಾವಿರ ರೂ., ಲೈಸೆನ್ಸ್ ಶುಲ್ಕದಿಂದ 35 ಸಾವಿರ ರೂ., ವೇತನ ಅನುದಾನದಿಂದ 1,54,24000 ರೂ, ವಿದ್ಯುತ್ ಶಕ್ತಿ ಅನುದಾದಿಂದ 1.68,57000 ರೂ. ಆದಾಯ ಬರಲಿದೆ ಎಂದು ಹೇಳಿದರು.ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಿಂದ 20 ಲಕ್ಷ ರೂ., ಎಸ್‌ಜೆಎಸ್‌ಆರ್‌ವೈ ಅನುದಾನದಿಂದ 25 ಲಕ್ಷ ರೂ., ಬರ ಪರಿಹಾರದಿಂದ 30 ಲಕ್ಷ ರೂ., 13 ನೇ ಹಣಕಾಸು ಯೋಜನೆ ಅನುದಾನದಿಂದ 1 ಕೋಟಿ ರೂ., ಅಸಾಮಾನ್ಯ ಆದಾಯ, ಅಮಾನತ ಖಾತೆ ಮತ್ತು ಇತರ ಆದಾಯದಿಂದ 7,11,55000, ಎಸ್‌ಎಫ್‌ಸಿ ಅನುದಾನ ರಾಜ್ಯ ಹಣಕಾಸು ಆಯೋಗದ ಅನುದಾನದಿಂದ 4,08,75000 ರೂ. ಹಾಗೂ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆ ಅನುದಾನದಿಂದ 10 ಕೋಟಿ ರೂ. ಸೇರಿ ಒಟ್ಟು 28,56,86000 ಆದಾಯ ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದರು.ಬರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು ನಗರದ ಅಭಿವೃದ್ಧಿಗೆ ಯೋಜನೆಗಳನ್ನು ಹಾಕಿ ಕೊಳ್ಳಲಾಗಿದೆ. ನಗರದ ಹೊಸ ರಸ್ತೆಗಳ ನಿರ್ಮಾಣಕ್ಕೆ 4 ಕೋಟಿ ರೂ., ಗಟಾರು ಮತ್ತು ಸಿ.ಡಿ. ನಿರ್ಮಾಣಕ್ಕೆ 7.50 ಕೋಟಿ ರೂ., ಹೊಸ ಪೈಪ್‌ಲೈನ್ ಜೋಡಣೆಗೆ 1 ಕೋಟಿ ರೂ., ಹೊಸ ಪಂಪ್‌ಸೆಟ್ ಖರೀದಿಗೆ 7.50 ಲಕ್ಷ ರೂ., ಕೆಯುಐಡಿಎಫ್‌ಸಿ ವಂತಿಗೆಗೆ 7.50 ಲಕ್ಷ ರೂ., ರಸ್ತೆ ದುರಸ್ತಿ ಹಾಗೂ ಮೆಟಲಿಂಗ್‌ಗೆ 2 ಕೋಟಿ ರೂ., ಗಟಾರ ದುರಸ್ತಿ ಮತ್ತು ಕಚ್ಚಾ ಗಟಾರ್ ನಿರ್ಮಾಣಕ್ಕೆ 80 ಲಕ್ಷ  ರೂ., ನಗರ ನೈರ್ಮಲ್ಯೀಕರಣಕ್ಕೆ 7.46 ಲಕ್ಷ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದರು.ನಗರದ ಪೈಪ್‌ಲೈನ್ ದುರಸ್ತಿಗೆ 50 ಲಕ್ಷ ರೂ., ಮೋಟಾರ್ ದುರಸ್ತಿಗೆ 20 ಲಕ್ಷ ರೂ., ನೀರು ಸರಬರಾಜು ಸಾಮಗ್ರಿ ಖರೀದಿಗೆ 10 ಲಕ್ಷ ರೂ., ಬೀದಿ ದೀಪ ಖರೀದಿಗೆ 25 ಲಕ್ಷ ರೂ., ಬೀದಿ ದೀಪ ನಿರ್ವಹಣೆ ಹಾಗೂ ವಿದ್ಯುತ್ ಬಿಲ್‌ಗೆ 50.57 ಲಕ್ಷ ರೂ., ನೀರು ಸರಬರಾಜು ವಿದ್ಯುತ್ ಬಿಲ್‌ಗೆ 1.18 ಕೋಟಿ ರೂ., ಸಿಬ್ಬಂದಿ ವೇತನಕ್ಕೆ 1.54.24000 ರೂ., ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗೆ 45 ಲಕ್ಷ ರೂ., ಶೇ 22.75 ರ ಎಸ್‌ಸಿ, ಎಸ್‌ಟಿ ಅಭಿವೃದ್ಧಿಗೆ 26.52 ಲಕ್ಷ ರೂ., ಶೇ 7.25 ರ ಇತರ ಜನರ ಅಭಿವೃದ್ಧಿಗೆ 8.46 ಲಕ್ಷ, ಕ್ರೀಡಾ ಚಟುವಟಿಕೆಗೆ 1.5ಲಕ್ಷ ರೂ., ಅಸಾಮಾನ್ಯ ಸಾಲ ಮತ್ತು ಅಮಾನತ್ ಖಾತೆಗೆ 4,80,82000 ರೂ. ಹಾಗೂ ಇತರೆ ವೆಚ್ಚಗಳಿಗೆ 86.47 ಲಕ್ಷ ರೂ.ಗಳು ಸೇರಿದಂತೆ ಒಟ್ಟು 28,50,38,000 ರೂ.ಗಳನ್ನು ತೆಗೆದಿರಿಸಲಾಗಿದೆ ಎಂದರು.ಸಭೆಯಲ್ಲಿ ಶಾಸಕ ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ, ಆಯುಕ್ತ ಎಚ್.ಕೆ.ರುದ್ರಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry