ಉಳಿತಾಯ ಯೋಜನೆಗೆ ಆದ್ಯತೆ ನೀಡಿ

7

ಉಳಿತಾಯ ಯೋಜನೆಗೆ ಆದ್ಯತೆ ನೀಡಿ

Published:
Updated:

ಚಿತ್ರದುರ್ಗ: ಪ್ರಸ್ತುತ ಪರಿಸ್ಥಿತಿಯಲ್ಲಿ ಅಂಚೆ ಇಲಾಖೆ ಉಳಿತಾಯ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಚಿತ್ರದುರ್ಗ ಅಂಚೆ ವಿಭಾಗದ ಅಧೀಕ್ಷಕ ದಿನೇಶ್ ಖರೆ ಸಲಹೆ ನೀಡಿದರು.

ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಅಂಚೆ ಇಲಾಖೆವತಿಯಿಂದ ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮಾ ಮೇಳ ಕಾಯಕ್ರಮದಲ್ಲಿ ಅವರು ಮಾತನಾಡಿದರು.ಮೊಬೈಲ್, ಇಂಟರ್‌ನೆಟ್ ಮುಂತಾದ ಆಧುನಿಕ ತಂತ್ರಜ್ಞಾನಗಳಿಂದ ಕಾಗದ ಪತ್ರಗಳನ್ನು ಬಳಸುವವರ ಸಂಖ್ಯೆ ಸಹಜವಾಗಿ ಕಡಿಮೆಯಾಗುತ್ತಿದೆ. ಆದ್ದರಿಂದ ಅಂಚೆ ಇಲಾಖೆ ಕಾರ್ಯವೈಖರಿಯಲ್ಲೂ ಅನಿವಾರ್ಯ ವಾಗಿ ಬದಲಾವಣೆ ಆಗಬೇಕಾಗಿದೆ. ಉಳಿತಾಯ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.ಸಾರ್ವಜನಿಕರು ಸುರಕ್ಷಿತವಾದ ವಿಮೆ, ಉಳಿತಾಯ ಖಾತೆ, ಮಾಸಿಕ ವರಮಾನ, ಕಾಲಮಿತಿ ಠೇವಣಿ ಮುಂತಾದ ಹಲವಾರು ಯೋಜನೆಗಳಲ್ಲಿ ಹಣ ತೊಡಗಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry