ಸೋಮವಾರ, ಅಕ್ಟೋಬರ್ 14, 2019
22 °C

ಉಳ್ಳಾಗಡ್ಡಿಯದ್ದೇ ಭರಾಟೆ

Published:
Updated:
ಉಳ್ಳಾಗಡ್ಡಿಯದ್ದೇ ಭರಾಟೆ

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಸೋಮವಾರ ಉಳ್ಳಾಗಡ್ಡಿ ತುಂಬಿದ ವಾಹನಗಳ ಸಾಲೇ ಸಾಲು. ಎಲ್ಲಿ ನೋಡಿದರೂ ಉಳ್ಳಾಗಡ್ಡಿಯದ್ದೇ ಸುದ್ದಿ.ಉಳ್ಳಾಗಡ್ಡಿ ಬೆಂಬಲ ಬೆಲೆ ಖರೀದಿಗೆ ಸೋಮವಾರ ಕಡೇ ದಿನವಾಗಿತ್ತು.  ಇದರಿಂದಾಗಿ ರೈತರು ಟ್ರ್ಯಾಕ್ಟರ್, ಟಂ ಟಂ ವಾಹನಗಳ ಮೂಲಕ ಉಳ್ಳಾಗಡ್ಡಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಕಾಟನ್ ಸೇಲ್ ಸೊಸೈಟಿಗೆ ತಂದಿದ್ದರು. ಹೊತ್ತು ಏರುತ್ತಿದ್ದಂತೆಯೇ ನೂರಾರು ವಾಹನಗಳು ಎಪಿಎಂಸಿ ಪ್ರಾಂಗಣದ ಮುಂದೆ ಜಮಾಯಿಸಿದ್ದವು.ಈ ಬಾರಿ ಗದಗ ಮಾರುಕಟ್ಟೆ ಪ್ರಾಂಗಣ ಹಾಗೂ ಕಾಟನ್ ಸೇಲ್ ಸೊಸೈಟಿ ಆವರಣ ಉಳ್ಳಾಗಡ್ಡಿ ಚೀಲಗಳು ತುಂಬಿಕೊಂಡಿತ್ತು. ಸಾಲದ್ದಕ್ಕೆ ರಸ್ತೆಯುದ್ದಕ್ಕೂ ಉಳ್ಳಾಗಡ್ಡಿ ಚೀಲಗಳನ್ನು ಇಡಲಾಗಿದೆ.ಸೋಮವಾರ ಕಾಟನ್ ಸೇಲ್ ಸೊಸೈಟಿಗೆ 30 ಸಾವಿರ ಚೀಲ ಹಾಗೂ ಎಪಿಎಂಸಿಗೆ 30 ಸಾವಿರ ಉಳ್ಳಾಗಡ್ಡಿ ಚೀಲ ಬಂದಿವೆ. ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಅವಧಿ ನೀಡಲಾಗಿತ್ತು. ಸಂಜೆಯಾದರೂ ಮಾರುಕಟ್ಟೆಗೆ ಉಳ್ಳಾಗಡ್ಡಿ ವಾಹನಗಳು ಬರುತ್ತಲೇ ಇದ್ದವು.

 

ಮಾರುಕಟ್ಟೆಗೆ ಬಂದಿರುವ ಉಳ್ಳಾಗಡ್ಡಿಗೆ ಗ್ರೇಡಿಂಗ್ ನೀಡಲು ಕನಿಷ್ಟ ಎರಡು-ಮೂರು ದಿನಗಳಾದರೂ ಬೇಕಾಗುತ್ತದೆ. ಇದರಿಂದಾಗಿ ಇದೀಗ ಬಂದಿರುವ ಉಳ್ಳಾಗಡ್ಡಿಗೆ ಗ್ರೇಡಿಂಗ್ ನೀಡುತ್ತಾರೋ ಇಲ್ಲವೋ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.

 

Post Comments (+)