ಸೋಮವಾರ, ಜನವರಿ 27, 2020
25 °C

ಉಸಕು ಸಂಗ್ರಹ: ಗ್ರಾಮಸ್ಥರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ಈಗಾಗಲೇ ಹಾಳು ಬಿದ್ದಿರುವ ರಾಟಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಉಸುಕು ಸಂಗ್ರಹಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಕೊರ್ಲಹಳ್ಳಿ ಗ್ರಾಮಸ್ಥರು ಬುಧವಾರ ತಹಸೀಲ್ದಾರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಮುಂಜಾನೆ ಕೊರ್ಲಹಳ್ಳಿ ಗ್ರಾಮದಿಂದ 3-4ಟ್ರಾಕ್ಟರ್‌ಗಳ ಮೂಲಕ ಮುಂಡರಗಿಗೆ ಆಗಮಿಸಿದ ಗ್ರಾಮಸ್ಥರು ಕೆಪಿಟಿಸಿಎಲ್ ಕಚೇರಿಯಿಂದ ಪಟ್ಟಣದ ವಿವಿಧ ರಸ್ತೆಗಳ ಮಾರ್ಗವಾಗಿ ತಹಸೀಲ್ದಾರ ಕಚೇರಿಗೆ ಆಗಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ `ವಿಜಯನಗರದ ಕಾಲದಲ್ಲಿ ಹೆಸರುವಾಸಿಯಾಗಿದ್ದ ರಾಟಿ ಗ್ರಾಮವನ್ನು ಕಂದಾಯ ಇಲಾಖೆಯು ಉಸುಕು ಸಂಗ್ರಹಿಸಲು ಬಳಸಿ ಕೊಳ್ಳುತ್ತಿರುವುದು ಅಸಮಂಜಸ ವಾಗಿದ್ದು, ತಕ್ಷಣ ಅಲ್ಲಿ ಉಸುಕು ಸಂಗ್ರಹವನ್ನು ಕೈಬಿಡಬೇಕು ಮತ್ತು ರಾಟಿ ಗ್ರಾಮವನ್ನು ಕೊರ್ಲಹಳ್ಳಿ ಗ್ರಾಮ ಪಂಚಾಯ್ತಿಗೆ ಬಿಟ್ಟುಕೊಡಬೇಕು~ ಎಂದು ಆಗ್ರಹಿಸಿದರು.`ಸುಮಾರು 23ಎಕರೆ ವಿಸ್ತಾರವಾದ ಹಳೆಯ ರಾಟಿ ಗ್ರಾಮದಲ್ಲಿ ಸಮೂದಾಯ ಭವನ, ಶಾಲೆ, ಉದ್ಯಾನವನಗಳನ್ನು ಒಳಗೊಂಡಂತೆ ಸುಸಜ್ಜಿತವಾದ ನವಗ್ರಾಮವನ್ನು ನಿರ್ಮಾಣ ಮಾಡಬೇಕು. ಈಗಾಗಲೇ ಅವಸಾನದ ಅಂಚಿನಲ್ಲಿರುವ ರಾಟಿ ಗ್ರಾಮದ ಗುಂಡಿ ಗುಂಡಾರಗಳನ್ನು, ಬಾವಿ, ಕಲ್ಯಾಣಿಗಳನ್ನು, ಐತಿಹಾಸಿಕ ಪಳೆಯುಳಿಕೆಗಳನ್ನು ರಕ್ಷಸಬೇಕು~ ಎಂದು ಅವರು ಒತ್ತಾಯಿಸಿದರು.`ರಾಟಿ ಗ್ರಾಮವು ತಾಲ್ಲೂಕಿನ ಮುಖ್ಯ ರಸ್ತೆಗೆ ಅಂಟಿಕೊಂಡಿದ್ದು, ಅಕ್ಕಪಕ್ಕದಲ್ಲಿ ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ದೊರೆಯುತ್ತಿದೆ. ಅಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿದರೆ ಸಾರ್ವಜನಿಕರಿಗೆ ಎಲ್ಲ ರೀತಿಯ ಅನುಕೂಲತೆಗಳು ಅಭ್ಯವಾಗಲಿವೆ. ಆದ್ದರಿಂದ ಅಲ್ಲಿ ಉಸುಕು ಸಂಗ್ರಹಿಸುವುದನ್ನು ಸ್ಥಗಿತಗೊಳಿಸಿ ಸಾರ್ವಜನಿಕರ ಬಳಕೆಗೆ ಅದನ್ನು ಬಿಟ್ಟುಕೊಡಬೇಕು~ ಎಂದು ಅವರು ಮನವಿ ಮಾಡಿಕೊಂಡರು.`ಐತಿಹಾಸಿಕ ಮಹತ್ವವನ್ನು ಹೊಂದಿದ್ದ ತಾಲ್ಲೂಕಿನ ಹಲವಾರು ಗ್ರಾಮಗಳು ಈಗಾಗಲೇ ಕಾಲಗರ್ಭದಲ್ಲಿ ಹೂತು ಹೋಗಿದ್ದು, ಸರಕಾರ ಅವುಗಳ ಕುರಿತು ವಿಶೇಷ ಸಂಶೋಧನೆ ಕೈಗೊಳ್ಳಬೇಕು ಮತ್ತು ಅವುಗಳ ಸಂರಕ್ಷಣೆಗೆ ವಿಶೇಷ ಗಮನ ಹರಿಸಬೇಕು~  ಅವರು ಆಗ್ರಹಿಸಿದ್ದಾರೆ.ಕೊರ್ಲಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮದನಸಾಬ್, ಎಪಿಎಂಸಿ ಸದಸ್ಯ ಶಾಸ್ತ್ರಿ, ಎಪಿಎಂಸಿ ಮಾಜಿ ಸದಸ್ಯ ಕೊಟ್ರಗೌಡ ಪಾಟೀಲ, ರಂಗಪ್ಪ ಹಿರೇಕುರುಬರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ ರಮೇಶ ಕೋನರಡ್ಡಿ ಮನವಿ ಸ್ವೀಕರಿಸಿದರು.

ಪ್ರತಿಕ್ರಿಯಿಸಿ (+)