ಉಸಿರುಗಟ್ಟಿಸಿ ಮಹಿಳೆ ಕೊಲೆ

7

ಉಸಿರುಗಟ್ಟಿಸಿ ಮಹಿಳೆ ಕೊಲೆ

Published:
Updated:

ಮದ್ದೂರು: ಸಮೀಪದ ಬೋರಾಪುರ ಗೇಟ್ ಬಳಿ ಉತ್ತರಭಾರತ ಮೂಲದ ಮಹಿಳೆಯನ್ನು ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಕಳೆದ ಗುರುವಾರ ರಾತ್ರಿ ನಡೆದಿದೆ.ಅಂದಾಜು 27 ವರ್ಷ ವಯಸ್ಸಿನ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಕಪ್ಪು-ಕೆಂಪು ಮಿಶ್ರಿತ ಬಣ್ಣದ ಚೂಡಿ ದಾರ್ ಧರಿಸಿರುವ ಮಹಿಳೆ ಯನ್ನು ವೇಲ್ ಮೂಲಕ ಉಸಿರು ಗಟ್ಟಿಸಿ ಕೊಂದಿರುವುದು ಕಂಡು ಬಂದಿದೆ. ಮೃತದೇಹವು ಬೇಲಿಯಲ್ಲಿ ದೊರಕಿದ್ದು, ಈಕೆ ಲೈವ್‌ಬ್ಯಾಂಡ್ ಗಾಯಕಿ ಇಲ್ಲವೇ ಬಾರ್‌ಗರ್ಲ್ ಇರಬಹುದು ಎಂದು ಶಂಕಿಸಲಾಗಿದೆ.ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಶುಕ್ರವಾರ ಹೆಚ್ಚುವರಿ ಎಸ್ಪಿ ರಾಜಣ್ಣ, ಡಿವೈಎಸ್‌ಪಿ ಉತ್ತಪ್ಪ, ಸಿಪಿಐ ಪ್ರಶಾಂತ್, ಪಿಎಸ್‌ಐ ಗೋಪಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಳ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡ ಲಾಗಿದೆ. ಪಟ್ಟಣ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry