ಉಸ್ತಾದ್ ಸುಲ್ತಾನ್ ಖಾನ್ ಅಸ್ತಂಗತ

7

ಉಸ್ತಾದ್ ಸುಲ್ತಾನ್ ಖಾನ್ ಅಸ್ತಂಗತ

Published:
Updated:
ಉಸ್ತಾದ್ ಸುಲ್ತಾನ್ ಖಾನ್ ಅಸ್ತಂಗತ

ಮುಂಬೈ (ಪಿಟಿಐ): ಖ್ಯಾತ ಸಾರಂಗಿ ವಾದಕ ಮತ್ತು ಶಾಸ್ತ್ರೀಯ ಸಂಗೀತಗಾರ ಉಸ್ತಾದ್ ಸುಲ್ತಾನ್ ಖಾನ್ (71) ಭಾನುವಾರ ಮಧ್ಯಾಹ್ನ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲಕಾಲದಿಂದ ಡಯಾಲಿಸೀಸ್‌ಗೆ ಒಳಪಡಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಂತ್ಯಕ್ರಿಯೆಯು ಜೋಧ್‌ಪುರದಲ್ಲಿ ಸೋಮವಾರ ನಡೆಯಲಿದೆ.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು `ಪಿಯಾ ಬಸಂತಿ~ ಮತ್ತು `ಅಲ್ಬೆಲಾ ಸಾಜನ್ ಆಯೊ ರೆ~ ದಂತಹ ಜನಪ್ರಿಯ ಗೀತೆಗಳನ್ನೂ ಹಾಡಿದ್ದರು.11ನೇ ವಯಸ್ಸಿಗೇ ಕಚೇರಿ ನೀಡಲು ಆರಂಭಿಸಿದ್ದ ಅವರು ನಂತರದಲ್ಲಿ ಖ್ಯಾತ ಸಿತಾರ್ ವಾದಕ ರವಿಶಂಕರ್ ಅವರ ಸಹಭಾಗಿತ್ವದೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಕಚೇರಿ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಖಾನ್ ಅವರದ್ದು ರಾಜಸ್ತಾನದ ಸಾರಂಗಿ ವಾದಕರ ಕುಟುಂಬ ಎಂದೇ ಹೇಳಬೇಕು.ಆರಂಭದಲ್ಲಿ ಅವರ ತಂದೆ ಉಸ್ತಾದ್ ಗುಲಾಬ್ ಖಾನ್ ಅವರಿಗೆ ಗುರು ಆಗಿದ್ದರು. ನಂತರ ಅವರು ಇಂದೋರ್ ಘರಾನಾ (ಶಾಲೆ)ದ ಶಾಸ್ತ್ರೀಯ ಗಾಯಕ ಉಸ್ತಾನ್ ಅಮೀರ್ ಖಾನ್ ಬಳಿ ತರಬೇತಿ ಪಡೆದರು.ಸಾರಂಗಿ ವಾದಕರೆಂದು ಜನಪ್ರಿಯತೆ ಪಡೆದ ಬಳಿಕ ಉಸ್ತಾದ್ ಸುಲ್ತಾನ್‌ಖಾನ್ ಹಿಂದಿ ಚಲನಚಿತ್ರೋದ್ಯಮದ ಲತಾ ಮಂಗೇಶ್ಕರ್, ಖಯ್ಯಾಂ, ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಅಲ್ಲದೆ ಪಾಶ್ಚಾತ್ಯ ಗಾಯಕರ ಜೊತೆಗೂ ಕೆಲಸ ಮಾಡಿದರು.ಇವರ ಪುತ್ರ ಸಬೀರ್ ಖಾನ್ ಕೂಡ ಸುಪ್ರಸಿದ್ಧ ಸಾರಂಗಿ ವಾದಕರಾಗಿದ್ದಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry