ಭಾನುವಾರ, ಜನವರಿ 19, 2020
23 °C
ಚಂದ ಪದ್ಯ

ಊಟದ ನಂತರ

–ನಾಗರಾಜ ವಸ್ತಾರೆ Updated:

ಅಕ್ಷರ ಗಾತ್ರ : | |

ಟದ ನಂತರ ಪಾಠ ಬೇಕೆ

ಬೋರು ಬೋರು ಬೋರು

ಗಡದ್ದು ಮೆದ್ದೆ, ನಿದ್ದೆ ಬೇಕು

ಜೋರು ಜೋರು ಜೋರು

ಮಧ್ಯಾಹ್ನದ ಮೊದಲ ಪಿರೀಡೇನೇ

ಏಕೇ ಸರ್ರದು ಗಣಿತ

ತಪ್ಪಿಸಿಯಾದರೆ ಜೋಕೆ ಜೋಕೆ

ಮೈ ಮುರಿದಾರು ಖಚಿತ

ಅಯ್ಯೋ ಬಿಡು ಆಗಿದ್ದಾಗಲಿ

ಬೇಜಾರಾ ಆಲ್ಜೀಬ್ರಾ

ಏಸ್ಕ್ವೇರ್ ಬೀಸ್ಕ್ವೇರ್ ಸೀಸ್ಕ್ವೇರಾದರೆ

ಹೊಟ್ಟೇಲಿನ್ನೂ ಉಬ್ರಾ

ಎಕ್ಸೂ ವೈಗೇ ಈಸೀಕ್ವಲ್ಟು

ಯಾರಿಗೆ ಬೇಕು ಹೋಗೋ

ಮ್ಯಾಚಿನ ಹಾಗೆ ಪಾಠವೇ ಫಿಕ್ಸು

ಮಾಡಿದರಾಯಿತು ತಗೋ

ಅಜ್ಜನ ಶ್ರಾದ್ಧ; ತಿಂದು ಬಂದೆನೆ

ಡರ್ರಾಮುರ್ರಾ ತೇಗು

ಮನೆಯಲಿದ್ದೇ ತೆಗೆದರೆ ನಿದ್ದೆ

ಎದುರೆ ಸ್ವರ್ಗದ ತೂಗು

ಹೀಗಂದಿದ್ದೇ ಸರಿ ಸರಿ ಅಂದನು

ಬೆರಗಲಿ ನಗುತ ಗೆಳೆಯ

ದುರಿತ ದರಿದ್ರ ಸಮೀಕರಣದ

ಗೋಜಿನ ಮನೆ ತಾ ತೊಳೆಯ!

ಪ್ರತಿಕ್ರಿಯಿಸಿ (+)