ಊದಿ ನೋಡಿ

7
ಮಾಡಿ ನಲಿ

ಊದಿ ನೋಡಿ

Published:
Updated:
ಊದಿ ನೋಡಿ

ಸಲಕರಣೆಗಳು: ಬೀಕರು, ಸಬಕಾರದ (ಸೋಪಿನ) ದ್ರಾವಣ, ಆಲಿಕೆ. 

 

ವಿಧಾನ: 1. ಒಂದು ಬೀಕರಿನಲ್ಲಿ (ಗಾಜಿನ ಕೊಕ್ಕು ಪಾತ್ರೆ) ಸಬಕಾರದ (ಸೋಪಿನ) ದ್ರಾವಣವನ್ನು ತಯಾರಿಸಿಕೊಳ್ಳಿ.

            2. ನಂತರ ಒಂದು ಆಲಿಕೆಯ ಬಾಯಿಯನ್ನು ಸೋಪಿನ ದ್ರಾವಣದಲ್ಲಿ ಪೂರ್ಣ ಮುಳುಗಿಸಿ.

            3. ಆಲಿಕೆಯ ನಳಿಕೆಯ ತುದಿಯಿಂದ ಸಾವಕಾಶವಾಗಿ ಊದಿ.

            4. ಊದುವುದನ್ನು ನಿಲ್ಲಿಸಿ.

ಪ್ರಶ್ನೆ: ಆಲಿಕೆಯ ಬಾಯಿಯಲ್ಲಿದ್ದ ಸೋಪಿನ ಪೊರೆಗೆ ಏನಾಗುತ್ತದೆ, ಯಾಕೆ?

ಉತ್ತರ: ಮೇಲ್ಮೈ ಎಳೆತದ (ಖ್ಠ್ಟ್ಛಚ್ಚಛಿ ಠಿಛ್ಞಿಜಿಟ್ಞ) ಕಾರಣದಿಂದ ದ್ರವದ ಮೇಲ್ಮೈ ಯಾವಾಗಲೂ ಅತಿ ಕಡಿಮೆ ಮೇಲ್ಮೈಯನ್ನು ಆವರಿಸುತ್ತದೆ. ಎಲ್ಲ ವ್ಯವಸ್ಥೆಗಳು ಅತಿ ಕಡಿಮೆ ಶಕ್ತಿಯ ಮಟ್ಟವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತವೆ.ಹೀಗಾಗಿ, ಮೇಲ್ಮೈ ಕ್ಷೇತ್ರವು ಕಡಿಮೆ ಇದ್ದಾಗ ಮೇಲ್ಮೈ ಶಕ್ತಿಯು ಕಡಿಮೆ ಇರುತ್ತದೆ. ಆದ್ದರಿಂದ ಆಲಿಕೆಯಲ್ಲಿ ಊದುವಾಗ ಸಬಕಾರದ ಗುಳ್ಳೆಯು ಹೊರಬರುತ್ತದೆ. ಊದುವುದನ್ನು ನಿಲ್ಲಿಸಿದಾಗ, ಅದು ಆಲಿಕೆಯ ಒಳಗೆ ಸೇರಿಕೊಳ್ಳುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry