ಸೋಮವಾರ, ಜೂನ್ 21, 2021
30 °C

ಊರುಗೋಲು ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ರೋಟರಿ ಸಂಸ್ಥೆಯಿಂದ ಸಿಗುವ ಸೌಲಭ್ಯವನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಮುಂದುವರಿಯಬೇಕು~ ಎಂದು ರೋಟರಿ ಇನ್ನರ್ ವ್ಹೀಲ್‌ನ ಅಧ್ಯಕ್ಷೆ ಕವಿತಾ ನಾಗರಾಜ್ ತಿಳಿಸಿದರು.ರೋಟರಿ ಕ್ಲಬ್‌ನ ಅಂಗ ಸಂಸ್ಥೆ ಇನ್ನರ್ ವ್ಹೀಲ್‌ನ ಉದ್ಘಾಟನಾ ಸಮಾರಂಭದಲ್ಲಿ  ಅವರು ಮಾತನಾಡಿದರು.  ರೋಟರಿ ಕ್ಲಬ್ ಅಧ್ಯಕ್ಷ ಇ.ಟಿ.ಕೇರ್ ರಾಜು ಮಾತನಾಡಿದರು.   ಇದೇ ಸಂದರ್ಭದಲ್ಲಿ ಇನ್ನರ್‌ವ್ಹೀಲ್ ಜಿಲ್ಲಾ ಅಧ್ಯಕ್ಷೆ ಅಮೃತಾ ಸುರೇಶ್ ಅವರು ಸರ್ಕಾರಿ ಶಾಲೆಗಳಿಗೆ ನೀರು ಶುದ್ದೀಕರಣ, ಕುಕ್ಕರ್‌ಗಳನ್ನು ಮತ್ತು  ವೃದ್ಧರಿಗೆ ಊರುಗೋಲುಗಳನ್ನು ವಿತರಿಸಿದರು. ರೋಟರಿ ಕಾರ್ಯದರ್ಶಿ ಎಸ್.ಮುನಿರಾಜಯ್ಯ, ಮಾಜಿ ಅಧ್ಯಕ್ಷ ಎಚ್.ಜಿ.ರಾಜು, ನಿರ್ದೇಶಕ ಪೃಥ್ವಿರಾಜ್, ಎಸ್.ಗಂಗರಾಜು, ಇನ್ನರ್‌ವ್ಹೀಲ್‌ನ ಶಾರದಾ ಪಾಟೀಲ್, ಮಾಳವಿಕಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.