ಊಹ್‌ಲಾಲ್ಲಾ.. ಊಹ್‌ಲಾಲಾ...

7

ಊಹ್‌ಲಾಲ್ಲಾ.. ಊಹ್‌ಲಾಲಾ...

Published:
Updated:

ನಾನು ವಿದ್ಯಾಗಿಂತ ಚೆನ್ನಾಗಿ ಊಹ್ ಲಾಲ್ಲಾ ಮಾಡಬಲ್ಲೆ... ವಿದ್ಯಾ ಬಾಲನ್ ಉತ್ತಮ ನಟಿ. ಆದರೆ ಮಾದಕ ಚೆಲುವೆಯಲ್ಲ. ನನಗೆ ಮಾದಕತೆ ದೇವರು ನೀಡಿದ ಬಳುವಳಿ... ಹೀಗಾಗಿ ನಾನು ಇನ್ನೂ ಚೆನ್ನಾಗಿ ಮಾಡಬಲ್ಲೆ~ ಹೀಗೆ ಆತ್ಮವಿಶ್ವಾಸದಿಂದ ಮಾತನಾಡುತ್ತಿರುವುದು ರಾಖಿ ಸಾವಂತ್.

ಬಂಗಾಲಿ ಭಾಷೆಯ `ಡರ್ಟಿ ಪಿಕ್ಚರ್~ಗೆ ರಾಖಿ ಸಾವಂತ್ ಸಿಲ್ಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಗೆಟಪ್, ತಮ್ಮ ನಟನೆಯ ಬಗ್ಗೆ ಹುರುಪಿನಿಂದ ಮಾತನಾಡುವ ರಾಖಿಗೆ ಈ ಚಿತ್ರ ಗೆಲ್ಲುವ ಬಗ್ಗೆ ಈಗಲೇ ವಿಶ್ವಾಸ ಮೂಡಿದೆಯಂತೆ.

ರಾಖಿಯನ್ನು ಕೇವಲ ಐಟಂ ಹುಡುಗಿಯಂತೆ ಬಾಲಿವುಡ್‌ನಲ್ಲಿ ನಡೆಸಿಕೊಳ್ಳಲಾಗಿತ್ತು. ಇಲ್ಲವೇ ಸಣ್ಣಪುಟ್ಟ ಪಾತ್ರಗಳನ್ನು ನೀಡಲಾಗಿತ್ತು. ಮುಖ್ಯ ಪಾತ್ರವನ್ನು ನಿರ್ವಹಿಸುವ ಮೊದಲ ಚಿತ್ರ ಇದಾಗಲಿದೆ. ಈ ಬಗ್ಗೆ ಖುಷಿಯಿಂದಲೇ ಪ್ರತಿಕ್ರಿಯಿಸಿರುವ ರಾಖಿ ಸಾವಂತ್‌ಗೆ ಈ `ಡರ್ಟಿ ಪಿಕ್ಚರ್~ ಹೊಸ ಇಮೇಜ್ ತಂದುಕೊಡಲಿದೆಯಂತೆ.

ಬಂಗಾಲಿ ಚಿತ್ರ ನಟಿ ಮತ್ತು ರಾಜಕಾರಣಿ ಶತಾಬ್ದಿ ರಾಯ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದು ಪರಿಪೂರ್ಣವಾಗಿ ಐಟಂ ಹುಡುಗಿಯ ಜೀವನಾಧಾರಿತ ಕತೆಯಾಗಲಿದೆ. ಬಾಲಿವುಡ್‌ನಲ್ಲಿ ಅಸಲು ಐಟಂ ಹುಡುಗಿ ಎಂದರೆ ನಾನೇ ಅಲ್ಲವೇ... ಹಾಗಾಗಿ ಈ ಪಾತ್ರ ನನ್ನನ್ನು ಅರಸಿ ಬಂದಿದೆ ಎಂದೂ ರಾಖಿ ವಿವರಿಸಿದ್ದಾರೆ.

ಪೂರ್ಣಪ್ರಮಾಣದ ನಾಯಕಿಯಾಗಿ ಮೊದಲ ಸಲ ನಟಿಸುತ್ತಿರುವುದರಿಂದ ಬಂಗಾಲಿ ಭಾಷೆಯನ್ನೂ ಕಲಿಯುತ್ತಿರುವುದಾಗಿ ರಾಖಿ ಹೇಳಿದ್ದಾರೆ. ಈಗಾಗಲೇ ಪೂರ್ತಿ ಬಂಗಾಲಿ ಸ್ಕ್ರಿಪ್ಟ್ ಅನ್ನು ಹಿಂದಿಯಲ್ಲಿ ಬರೆದುಕೊಡಲು ನಿರ್ದೇಶಕಿಗೆ ಕೋರಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುವ ಇರಾದೆ ಇದೆಯೆಂದು ರಾಖಿ ಹೇಳಿದ್ದಾರೆ. ರಾಖಿಯ ಈ ಉತ್ಸಾಹ ನಿರ್ದೇಶಕಿಗೂ ಅಚ್ಚರಿ ಮೂಡಿಸಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry