ಶುಕ್ರವಾರ, ಏಪ್ರಿಲ್ 23, 2021
31 °C

ಋಣಮುಕ್ತನಾದ ರೈತ: ಅಭಿನಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ತಾಲ್ಲೂಕಿನ ಟಿ. ಬೊಮ್ಮನಳ್ಳಿ ಗ್ರಾಮದ ರೈತ ದೇವಿಂದ್ರಪ್ಪ ನಿಂಗಪ್ಪ ನಾಶಿ ಅವರಿಗೆ ರಿಯಾಯಿತಿ ಕಲ್ಪಿಸುವ ಮೂಲಕ ಸಾಲದಿಂದ ಋಣಮುಕ್ತನನ್ನಾಗಿ ಮಾಡಿದ ಇಲ್ಲಿನ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ಸಂಜೀವಕುಮಾರ ಸಂಶಿ ಅವರನ್ನು ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಸನ್ಮಾನಿಸಿದರು.ತಾಲ್ಲೂಕಿನ ಟಿ. ಬೊಮ್ಮನಳ್ಳಿ ಗ್ರಮದ ರೈತ ದೇವಿಂದ್ರಪ್ಪ ನಿಂಗಪ್ಪ ನಾಶಿ ಸತತ ಬರಗಾಲದಿಂದ ಸಂಕಷ್ಟದಲ್ಲಿದ್ದ.   ಕರ್ಣಾಟಕ ಬ್ಯಾಂಕಿನಿಂದ ಟ್ರ್ಯಾಕ್ಟರ್ ಮತ್ತು ಬೆಳೆಸಾಲ ಪಡೆದಿದ್ದ. ಸತತ ನಷ್ಟ ಅನುಭವಿಸಿದ್ದರಿಂದ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲ ಹೆಮ್ಮರವಾಗಿ ಬೆಳೆದಿತ್ತು. ದಿಕ್ಕು ತೋಚದಂತಾಗಿ ಆತ್ಮಹತ್ಯೆಯ ಯೋಚನೆಯಲ್ಲಿದ್ದ.ಆಗ ನೆರವಿಗೆ ಬಂದವರು ಕರ್ನಾಟಕ ಪ್ರಾಂತ ರೈತ ಸಂಘದವರು. ರೈತನನ್ನು ಸಮಾಧಾನ ಪಡಿಸಿದರು. ಕಷ್ಟಗಳನ್ನು ಜಯಸಿದವನೆ ನಿಜವಾದ ರೈತ ಎಂದು ಹುರಿದುಂಬಿಸಿದರು. ಆತನನ್ನು ಬ್ಯಾಂಕಿಗೆ ಕರೆದುಕೊಂಡು ಬಂದು ವ್ಯವಸ್ಥಾಪಕರಿಗೆ ವೃತ್ತಾಂತ ವಿವರಿಸಿದರು. ಮೇಲಾಧಿಕಾರಿಗಳಿಗೆ ಮನವಿ ಮಾಡಿದ ವ್ಯವಸ್ಥಾಪಕರು ಒನ್ ಟೈಮ್ ಸೆಟಲ್‌ಮೆಂಟ್   ಮಾಡಿ ರೈತನನ್ನು ಋಣಮುಕ್ತನನ್ನಾಗಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ಸಂಶಿ, ಸಾಲ ಮರುಪಾವತಿ ಬಹಳ ಮುಖ್ಯ. ಪ್ರತಿ ವರ್ಷ ತಪ್ಪದೆ ಕಂತುಗಳನ್ನು ಪಾವತಿಸಿದರೆ ಸಾಲ ಭಾರವಾಗುವುದೆ ಇಲ್ಲ. ಸಾಲ ಮರುಪಾವತಿಸಿದರೆ ಇನ್ನೊಬ್ಬರಿಗೆ ಸಾಲ ಕೊಡಲು ಸಾಧ್ಯವಾಗುತ್ತದೆ. ಸಾಲವನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬನ್ನಿ ಎಂದು ಕರೆ ನೀಡಿದರು.ರೈತ ಸಂಘದ ಮುಖಂಡರಾದ ಯಲ್ಲಪ್ಪ ಚಿನ್ನಾಕಾರ್, ನಾಗಣ್ಣ ಪುಜಾರಿ, ದರ್ಮಣ್ಣ ದೊರಿ, ಬಸವರಾಜ ನಾಯಕ್, ಶಿವನಗೌಡ ರುಕ್ಮಾಪುರ, ಹಣಮಂತ್ರಾಯ ಮಡಿವಾಳ, ರಾಮನಗೌಡ ಆಲ್ಹಾಳ, ರಾಮಯ್ಯ ಭೋವಿ, ಲಂಕೇಶಪ್ಪ ಸಾಹುಕಾರ್, ಭೀಮರಾಯ ಬೊಮ್ಮನಳ್ಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಲದಿಂದ ಋಣಮುಕ್ತನಾದ ದೇವಿಂದ್ರಪ್ಪ ಅವರ ಕಣ್ಣಂಚಿನಲ್ಲಿ ಅಶ್ರುಧಾರೆ ಬಂದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.